ಹೊಳೆನರಸೀಪುರ: ಅನೇಕ ವರ್ಷಗಳಿಂದ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಎಚ್. ಆರ್. ಲೋಕೇಶ್ (48) ಸೋಮವಾರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಪೂಜೆ ಕೊಪ್ಪಲು ಗ್ರಾಮದ ಲೋಕೇಶ್ ಸ್ವಗ್ರಾಮದಿಂದ ಸರ್ಕಾರಿ ವೈದ್ಯಕೀಯ ಸೇವೆ ಸಲ್ಲಿಸುತಿದ್ದ ಹಾಸನ ತಾಲೂಕು ಹೂವಿನಹಳ್ಳಿ ಕಾವಲು ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತಿದ್ದಾಗ ಮಾರ್ಗ ಮಧ್ಯೆ ಮೊಸಳೆ ಹೊಸಳ್ಳಿ ಹತ್ತಿರ ಎದುರಿನಿಂದ ಬರುತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಡಾ.ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ, ತಂದೆ,ತಾಯಿ, ಅಣ, ತಮ್ಮ ಇದ್ದಾರೆ.