ಕನ್ನಡಪ್ರಭ ವಾರ್ತೆ ಅರಸೀಕೆರೆ ಮಾ.6
ಪಟ್ಟಣದ ಪುರಸಭೆಗೆ ಗುರುವಾರ ಬೆಳಗ್ಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಿಗಾಗಿ ಗುರುತಿಸಲಾಗಿದ್ದ ಶಾಲೆ ಮತ್ತು ಕಾಲೇಜುಗಳನ್ನು ಬುಧವಾರ ಬೆಳಗ್ಗೆ 8-15 ರಿಂದ 11.30 ರವರೆಗೆ ಶಾಲೆ ನಡೆಸಲಾಯಿತು. ಆನಂತರ ಮತಗಟ್ಟೆ ಸಿದ್ಧತೆಗಾಗಿ ಆ ಶಾಲೆಗಳಿಗೆ ರಜೆ ನೀಡಿರುವುದಲ್ಲದೆ ಗುರುವಾರ ಪುರಸಭಾ ವ್ಯಾಪ್ತಿಯ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.