ಬೇಲೂರು: ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಪಟ್ಟಣದ ವಾಸವಿ ಯುವಜನ ಸಂಘದಿಂದ ಮಿನರಲ್ ವಾಟರ್, ಬಿಸ್ಕತ್ತು ಪ್ಯಾಕೇಟ್ ಹಾಗೂ ಜೋಳದ ರೊಟ್ಟಿ ನೀಡಲಾಯಿತು. ಪೇಟೆ ವಾಸವಿ ಯುವಜನ ಸಂಘ ಅಧ್ಯಕ್ಷ ಬಿ.ಎಸ್.ಅಶೋಕ್ ಮಾತನಾಡಿ, ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಾಯಾತ್ರಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಸಲು ಸಂಘದ ಸದಸ್ಯರು ತೀರ್ಮಾನಿಸಿದ್ದರು. ಇದರೆ ಜೊತೆಗೆ ಬಿಸ್ಕತ್ತು ಹಾಗೂ ಜೋಳದ ರೊಟ್ಟಿಯನ್ನೂ ನೀಡಲು ಮುಂದಾಗಿ 1500 ಮಿನರಲ್ ಬಾಟಲ್ಗಳು, 2000 ಬಿಸ್ಕತ್ತು ಪ್ಯಾಕೇಟ್ ಹಾಗೂ 300 ಕ್ಕೂ ಹೆಚ್ಚು ಜೋಳದ ರೊಟ್ಟಿಯನ್ನು ಪೂರೈಸಲಾಯಿತು ಎಂದು ತಿಳಿಸಿದರು. ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಎನ್.ವಿಶ್ವನಾಥ್, ನಿರ್ದೇಶಕ ರಮೇಶ ಗುಪ್ತ, ರಾಮಚಂದ್ರ ಶೆಟ್ಟಿ, ಕೋದಂಡರಾಮ ಶೆಟ್ರು, ಸುರೇಶ್, ಗುರುರಾಜ, ವಿನಯ್, ಅಮೃತ, ಶ್ರೀನಿವಾಸ, ಅಂಜನ್, ಅನೂಪ್, ಹರೀಶ್ ಇತರರು ಇದ್ದರು.
ಧರ್ಮಸ್ಥಳಕ್ಕೆ ಪಾದಯಾತ್ರೆ
ರಾಮನಾಥಪುರ: ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಬುಧವಾರ ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸಿ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಲಾಯಿತು. ಕಾವೇರಿ ನದಿ ದಂಡೆಯಲ್ಲಿರುವ ಕೇರಳಾಪುರದ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ರಾಮನಾಥಪುರ, ಶನಿವಾರಸಂತೆ, ಸುಬ್ರಹ್ಮಣ್ಯ ಮಾರ್ಗವಾಗಿ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಾನ ತಲಪುವರು.