ಕನ್ನಡಪ್ರಭ ವಾರ್ತೆ, ಹಾಸನ. ಮಾ 7
ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಮತ ಹಾಕಲು ಹೋದಾಗ ಚುನಾವಣಾಧಿಕಾರಿ ಹೆಸರು ಇಲ್ಲವೆಂದು ಹೇಳಿದ್ದರಿಂದ ಗುರುವಾರ ಕೆಲ ಕಡೆ ಗೊಂದಲ ಉಂಟಾಯಿತು. ನಗರದ 19ನೇ ವಾರ್ಡ್ನ ಡಿ.ತಿಮ್ಮಯ್ಯ ಕುಟುಂಬದ 4 ಜನ ಸದಸ್ಯರ ಹೆಸರಿನ ಪಟ್ಟಿಯಲ್ಲಿದ್ದು, ಮತ ಚಲಾಯಿಸಲು ಹೋದ ಸಂದರ್ಭದಲ್ಲಿ ಚುನಾವಣಾಧಿಕಾರಿ ಹೆಸರು ಇಲ್ಲದ ಕಾರಣ ಮತ ಹಾಕಲು ಸಾಧ್ಯವಿಲ್ಲ ಎಂದರು. ತಿಮ್ಮಯ್ಯ ಮತ್ತು ಕುಟುಂಬದವರು ಗುರುತಿನ ಚೀಟಿ ಮತ್ತು ಪಟ್ಟಿಯಲ್ಲಿರುವ ಹೆಸರಿನ ಪ್ರತಿ ಪ್ರದರ್ಶಿಸಿದರು. ಇದೆ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಸಮಧಾನ ಮಾಡಲು ಮುಂದಾದರು. ಇದೆ ರೀತಿ ಇತರೆ ವಾರ್ಡ್ಗಳಲ್ಲಿಯೂ ಅನೇಕರ ಹೆಸರು ಬಿಟ್ಟು ಹೋಗಿತ್ತು.