ಕನ್ನಡಪ್ರಭ ವಾರ್ತೆ, ಬೇಲೂರು, ಮಾ. 7
ಇಲ್ಲಿನ ಪುರಸಭೆಗೆ ಸ್ಪರ್ಧಿಸಿದ್ದ 7 ವಾರ್ಡಿನ ಅಭ್ಯರ್ಥಿಯನ್ನು ಅಕ್ರಮ ಮದ್ಯ ಇಟ್ಟುಕೊಂಡಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಚನ್ನಕೇಶವಸ್ವಾಮಿ ದೇವಾಲಯ ಸಮೀಪ ವ್ಯಾನಿನಲ್ಲಿದ್ದ 7 ನೇ ವಾರ್ಡಿನ ಅಭ್ಯರ್ಥಿ ಕಾಯಿಶಿವು ಸ್ನೇಹಿತ ಈಶ ಎಂಬುವರ ಜೊತೆ ಕುಳಿತಿದ್ದರು. ಈ ಸಂದರ್ಭದಲ್ಲಿ ದಾಳಿ ಮಾಡಿದ ಪಿಎಸ್ಐ ತಂಡ ವ್ಯಾನನ್ನು ಪರಿಶೀಲಿಸಿದಾಗ 6 ಲೀಟರ್ ಮದ್ಯ ಹಾಗೂ 42 ಸಾವಿರ ರು. ನಗದು ಮತ್ತು ಕರಪತ್ರಗಳು ದೊರಕಿದ್ದು ಕೂಡಲೆ ಇಬ್ಬರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಇಲ್ಲಿನ 5 ನೇ ವಾರ್ಡಿನ ಕೆಜೆಪಿ ಅಭ್ಯರ್ಥಿ ಸತೀಶ ಎಂಬುವರ ಕಾರಿನ ಮೇಲೆ ಭಿತ್ತಿಪತ್ರವಿದೆ ಎಂಬ ಕಾರಣಕ್ಕೆ ವಾಹನವನ್ನು ಪೊಲಿಸರು ವಶಪಡಿಸಿ ಕೊಂಡಿದ್ದಾರೆ.