ಆಲೂರು: ತಾಲೂಕಿನಾದ್ಯಂತ ಭಾನುವಾರ ಮಹಾಶಿವರಾತ್ರಿಯನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಮುಜರಾಯಿ ದೇವಾಲಯಗಳಿಗೆ ಗಂಗಾಜಲ ವಿತರಿಸಲಾಯಿತು. ಶಿವಲಿಂಗಕ್ಕೆ ವಿವಿಧ ಅಭಿಷೇಕ ನಡೆಸಿದರು. ಭಕ್ತಾಧಿಗಳಿಗೆ ಫಲಹಾರ ವಿನಿಯೋಗಿ ಸಲಾಯಿತು. ರಾತ್ರಿಯಿಡಿ ದೇವಾಲಯದಲ್ಲಿ ಜಾಗರಣೆ ನಡೆದು ದೇವರ ಕೀರ್ತನೆ, ಭಕ್ತಿಗೀತೆ ಹಾಗೂ ಭಜನೆ ನಡೆಯಿತು. ಇದೇ ರೀತಿ ತಾಲೂಕಿನಾದ್ಯಂತ ಇರುವ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಐಯ್ಯಪ್ಪಸ್ವಾಮಿ, ಯಲ್ಲಮ್ಮ ದೇವಾಲಯ, ಶನೇಶ್ವರ, ಹಳೇ ಆಲೂರಿನ ತಿರುಮಲ ರಂಗನಾಥಸ್ವಾಮಿ, ಮರಸು ರಂಗನಾಥ ಹಾಗೂ ಪಾಳ್ಯದ ಲಕ್ಷ್ಮೀಜನಾರ್ಧನ ದೇವಾಲಯ, ಮರಸು ಹೊಸಳ್ಳಿ ಅರಸಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.