ಹಾಸನ: ನಗರದ ಎನ್.ಆರ್.ವೃತ್ತದಲ್ಲಿರುವ ಕೆನರಾ ಬ್ಯಾಂಕಿನ ಮುಖ್ಯ ಶಾಖೆಯ ಎಟಿಎಂನಲ್ಲಿ ಲಕ್ಷಾಂತರ ರು. ಕಳವು ಮಾಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಎರಡು ದಿವಸದಿಂದ ಬ್ಯಾಂಕ್ ರಜೆ ಇದ್ದು, ಸೋಮವಾರ ಕಳ್ಳತನವಾದ ಬಗ್ಗೆ ತಿಳಿದು ಬಂದಿದೆ. ಬೀಗ ಒಡೆದಿರುವ ಬಗ್ಗೆ ಯಾವುದೇ ಸುಳಿವು ಕಂಡು ಬಂದಿಲ್ಲ. ಆದರೆ ಹಣವನ್ನು ಚಾಣಕ್ಷತನದಿಂದ ಕಳವು ನಡೆದಿದೆ. ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ಅಮಿತ್ಸಿಂಗ್, ಡಿವೈಎಸ್ಪಿ ಯಡಾ ಮಾರ್ಟಿನ್, ವೃತ್ತ ನಿರೀಕ್ಷಕ ಸಂಜೀವೆಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.