ಹಾಸನ: ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆಯ ಧನ ಸಹಾಯದಿಂದ ಪರಿಶಿಷ್ಟ ಜಾತಿ ವಿಶೇಷ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ, ಅರ್ಹ ಪರಿಶಿಷ್ಟ ಜಾತಿ, ಪಂಗಡಗಳ ನಿರುದ್ಯೋಗಿ ಯುವಕ, ಯುವತಿಯರಿಗೆ ಔಪಚಾರಿಕ (ಹೊಟೇಲ್ ಉದ್ಯಮ) ಕ್ಷೇತ್ರದಲ್ಲಿ ಈ ಕೆಳಕಂಡ ತರಬೇತಿಗಳನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯ ಕ್ಷೇತ್ರಗಳು: ಫುಡ್ಪ್ರೊಡಕ್ಷನ್, ಫುಡ್ ಆ್ಯಂಡ್ ಬೆವರೇಜ್ ಸರ್ವಿಸ್, ಹೋಟೆಲ್ ಹೌಸ್ ಕೀಪಿಂಗ್.
ತರಬೇತಿ ಪಡೆಯಲು ಇರಬೇಕಾದ ಅರ್ಹತೆಗಳು- ಅಭ್ಯರ್ಥಿಯು ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರಬೇಕು. ಅಭ್ಯರ್ಥಿಯು 18ರಿಂದ 28 ವರ್ಷದೊಳಗಿರಬೇಕು.
ತರಬೇತಿಯ ವಿಶೇಷತೆಗಳು: ತರಬೇತಿಯನ್ನು ಸುಸಜ್ಜಿತ ಶಿಕ್ಷಣ ಸಂಸ್ಥೆಯಿಂದ ನೀಡಲಾಗುವುದು. ತರಬೇತಿಯ ಅವಧಿ 48 ದಿನಗಳು, ತರಬೇತಿಯ ಅವಧಿಯಲ್ಲಿ 2,000 ಸ್ಟೈಫಂಡ್ ಹಾಗೂ 1,500 ಪ್ರಯಾಣ ಭತ್ಯೆ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು.
ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಫುಡ್ಕ್ರಾಫ್ಟ್ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗುವುದು ಹಾಗೂ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಕೆಲಸ ಪಡೆಯಲು ಸಹಾಯ ಮಾಡಲಾಗುವುದು.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು: ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 2 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ದೃಢೀಕರಿಸಿದ ಮೂಲ ಜಾತಿ ಪ್ರಮಾಣ ಪತ್ರ. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ವರ್ಗಾವಣೆ ದಣಢೀಕರಣ ಪತ್ರ, ಪಡಿತರ ಚೀಟಿ ಪ್ರತಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಚಾಲನಾ ಪರವಾನಗಿ ಪತ್ರ.
ತರಬೇತಿ ನೀಡುವ ಸ್ಥಳ- ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್, ಯಗಚಿ ಜಲಾಶಯದ ಮುಂಭಾಗ, ಬೇಲೂರು- 573115, ಹಾಸನ ಜಿಲ್ಲೆ, ದೂ- 08177-222134. ಮಾ. 25ರಿಂದ ತರಬೇತಿ ಪ್ರಾರಂಭವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್, (ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದಿಂದ ಸ್ಥಾಪಿತ ಸಂಸ್ಥೆ), ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿ, ಯಗಚಿ ಜಲಾಶಯದ ಮುಂಭಾಗ, ಬೇಲೂರು - 573115, ಹಾಸನ ಜಿಲ್ಲೆ, ದೂ- 08177-222134, ಇಮೇಲ್- ಜ್ಛ್ಝಿಛಿಜಟ್ಡ್ಠ.್ಞಛಖಟ್ಝ್ಛಿ.್ಝಟಿ, ವೆಬ್ಸೈಟ್- ಢಿಢಿಢಿ. ಜ್ಛ್ಝಿಛಿಜಟ್ಡ್ಠ.್ಞಛ್ಠ.ಟ್ಝ್ಛಿ.್ಝಟಿ ಇವರನ್ನು ಸಂಪರ್ಕಿಸಬೇಕೆಂದು ಬೇಲೂರು ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರು ಕೋರಿದ್ದಾರೆ.