ರಾಮನಾಥಪುರ: ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಈಶ್ವರ ದೇವಸ್ಥಾನ ನಿರ್ಮಾಣವಾಗುತ್ತಿದೆ. ಕಾವೇರಿ ನೀರಾವರಿ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದ್ದು, ಗರ್ಭಗುಡಿಗೆ ಗ್ರಾನೈಟ್ ಹಾಕುವುದು, ಕೌಂಪೌಂಡ್ ನಿರ್ಮಾಣ ಸೇರಿದಂತೆ ಉಳಿದಿರುವ ಕಾಮಗಾರಿಗೆ ಸುಮಾರು 10 ಲಕ್ಷ ರು. ಹೆಚ್ಚುವರಿ ಅಂದಾಜು ಪಟ್ಟಿ ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಕೊಣನೂರು ಹಾರಂಗಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವನಾಥ್ ತಿಳಿಸಿದರು.ಕಾಳೆನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದ ನಂತರ ಕ್ಷೇತ್ರದ ಶಾಸಕ ವಾಲೆ ಮಂಜು ಅವರಲ್ಲಿ ವಿನಂತಿಸಿ, ಉಳಿದಿರುವ ಈಶ್ವರ ದೇವಸ್ಥಾನದ ಕೆಲಸವನ್ನು ಮುಗಿಸಲು ಸರ್ಕಾರಕ್ಕೆ 10 ಲಕ್ಷ ರು. ಹೆಚ್ಚುವರಿ ಅಂದಾಜು ಪಟ್ಟಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಶೀಘ್ರವೇ ಹಣ ಬಿಡುಗಡೆ ಮಾಡಿಸಿಕೊಡುವಂತೆ ಶಾಸಕರಲ್ಲಿ ದೇವನಾಥ್ ಮನವಿ ಮಾಡಿದರು.