ಕ.ಪ್ರ. ವಾರ್ತೆ ಹಳೇಬೀಡು ಮಾ. 29
ಏ.1 ರಿಂದ 10 ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೋಬಳಿಯಿಂದ 422 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಹಳೇಬೀಡಿನಲ್ಲಿ ಎರಡು ಕೇಂದ್ರಗಳಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ 216 ವಿದ್ಯಾರ್ಥಿಗಳು ಮತ್ತು ಹೊಯ್ಸಳ ಪ್ರೌಢಶಾಲೆ ಕೇಂದ್ರದಲ್ಲಿ 206 ವಿದ್ಯಾರ್ಥಿಗಳು ಒಟ್ಟು 422 ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಅಧೀಕ್ಷಕರಾಗಿ ಮುಳ್ಳಯ್ಯ ಮತ್ತು ಹೊಯ್ಸಳ ಪ್ರೌಢಶಾಲೆ ಮುಖ್ಯ ಅಧೀಕ್ಷಕರಾಗಿ ಕೆ.ಆರ್. ಬಸವರಾಜೇಗೌಡ ನೇಮಕಗೊಂಡಿದ್ದಾರೆ. ಈ ಎರಡು ಕೇಂದ್ರಗಳಿಗೆ ಹಳೇ ಬೀಡು ಸ.ಪ.ಪೂ. ಪ್ರೌಢಶಾಲೆ, ಹೊಯ್ಸಳ ಪ್ರೌಢಶಾಲೆ, ಬಸವ ರಾಜೇಂದ್ರ ಪ್ರೌಢಶಾಲೆ ಮತ್ತು ಕಲ್ಪತರು ಪ್ರೌಢಶಾಲೆ, ರಾಜಗೆರೆ ಪ್ರೌಢಶಾಲೆ, ಲಿಂಗಪ್ಪನಕೊಪ್ಪಲು ಪ್ರೌಢಶಾಲೆ, ಹೆಬ್ಬಾಳು ಪ್ರೌಢಶಾಲೆ, ರಾಜನಸಿರಿ ಯೂತ್ ಪ್ರೌಢಶಾಲೆ 4 ಸರ್ಕಾರಿ 4 ಖಾಸಗಿ ಪ್ರೌಢಶಾಲೆಗಳು ಒಟ್ಟು 8 ಪ್ರೌಢಶಾಲೆ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಮಕ್ಕಳಿಗೆ ಯಾವುದೇ ತೊಂದರೆ ಇಲ್ಲದಂತೆ ಆರೋಗ್ಯ ಕೇಂದ್ರದಿಂದ ತುರ್ತು ಚಿಕಿತ್ಸೆಗಾಗಿ ವಿದ್ಯಾರ್ಥಿಗಳಿಗೆ ದಾದಿ ಮತ್ತು ರಕ್ಷಣೆಗಾಗಿ ಪೋಲೀಸರನ್ನು ನಿಯೋಜಿಸಲಾಗಿದೆ. ಪರೀಕ್ಷೆ ನಡೆಸಲು 9 ಜಾಗೃತ ದಳ, ಪ್ರತಿ ತಂಡದಲ್ಲಿ 4 ಸದಸ್ಯರಿದ್ದಾರೆ. ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್, ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮೂರು ತಂಡ ರಚಿಸಲಾಗಿದೆ. ಜೊತೆಗೆ ಸಿಟ್ಟಿಂಗ್ ಸ್ಕ್ವಾಡ್ ಇಬ್ಬರು ಇರುತ್ತಾರೆ.
ಪರೀಕ್ಷೆ ಬೆಳಗ್ಗೆ 9.30ರಿಂದ 12.45ರ ವರೆಗೆ ನಡೆಯುತ್ತದೆ. ಜಿಲ್ಲಾಧಿಕಾರಿಗಳು 144 ನಿಯಮ ಜಾರಿ ಮಾಡಿರುವ ಜೊತೆಗೆ ಮಾಧ್ಯಮದವರಿಗೂ ಒಳ ಪ್ರವೇಶಕ್ಕೆ ಕಡಿವಾಣ ಹಾಕಿದೆ. ಫೋನ್, ಜೆರಾಕ್ಸ್ ಕೂಡ ನಿಷೇಧಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಭಾಗವಹಿಸುವರು ಗುರುತಿನ ಚೀಟಿ ಅಥವಾ ಬ್ಯಾಡ್ಜ್ ಧರಿಸುವಂತೆ ತಿಳಿಸಲಾಗಿದೆ.