ಕನ್ನಡಪ್ರಭ ವಾರ್ತೆ ಬೇಲೂರು ಮಾ.29
ವಾರದ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಕೆಜೆಪಿ ಪ್ರಬಲ ಆಕಾಂಕ್ಷಿಯಾದ ಕೊರಟಿಕೆರೆ ಪ್ರಕಾಶ್ ಹಾಗೂ ನನ್ನೊಂದಿಗೆ ಮಾತುಕತೆ ನಡೆಸಿ ತಮಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು ಎಂದು ತಾಲೂಕು ಕೆಜೆಪಿ ಮುಖಂಡ ಬಿ. ಶಿವರುದ್ರಪ್ಪ ಹೇಳಿದ್ದಾರೆ.
ಅದರಂತೆ ತಾವು ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಚಾರ ನಡೆಸಿದ್ದೆ. ಆದರೆ ಈಗ ದಿಢೀರನೆ ಮಾಜಿ ಶಾಸಕ ವಿಶ್ವನಾಥ್ ಹೆಸರು ಕೇಳಿ ಬರುತ್ತಿದೆ. ಆರಂಭದಲ್ಲಿ ತಮಗೆ ಟಿಕೆಟ್ ಎಂದು ಹೇಳಿ ಈಗ ಏಕಾಏಕಿ ಹೊರಗಿನವರಿಗೆ ಟಿಕೆಟ್ ಕೊಡಲು ಮುಂದಾಗಿದ್ದು, ಈ ದಿಸೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರಟಿಕೆರೆ ಪ್ರಕಾಶ ಹಾಗೂ ತಮಗೆ ಸೇರಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿದರೂ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ಈ ದಿಸೆಯಲ್ಲಿ ಯಡುಯೂರಪ್ಪನವರು ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.