ಕ.ಪ್ರ.ವಾರ್ತೆ ಹಾಸನ ಮಾ 28
ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಬಸವನ ಬಾಗೇವಾಡಿಯಿಂದ ಕೂಡಲ ಸಂಗಮದವರೆಗೆ ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸುತ್ತಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಮಾ.31ರಂದು ಅರಕಲಗೂಡು ಮಾರ್ಗವಾಗಿ ಹಾಸನಕ್ಕೆ ಆಗಮಿಸಲಿದೆ ಎಂದು ವೀರಶೈವ ಸಂಘದ ಅಧ್ಯಕ್ಷಐಸಾಮಿಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಬಸವ ಸಮಿತಿ ಮತ್ತು ರಾಜ್ಯದ ನಾನಾ ಸಂಘನಟೆಗಳ ಸಂಯುಕ್ತಾಶ್ರಯದಲ್ಲಿ ಮಾ.13ರಿಂದ ಏ.14ವರೆಗೆ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಬಸವನ ಬಾಗೇವಾಡಿಯಿಂದ ಕೂಡಲ ಸಂಗಮದವರೆವಿಗೆ ಜಿಲ್ಲೆಯಿಂದ ಜಿಲ್ಲೆಗೆ ಶರಣ ಸಂಸ್ಕೃತಿ ಮಹಾಯಾತ್ರೆ ಆಗಮಿಸುತ್ತಿದೆ ಎಂದರು. ಮಾ.31ರಂದು ಅರಕಲಗೂಡು ಮಾರ್ಗವಾಗಿ ಸಂಜೆ 4ಕ್ಕೆ ಹಾಸನಕ್ಕೆ ಆಗಮಿಸಲಿದ್ದು, ನಗರಸಭೆಯ ಕಚೇರಿಯ ಮುಂದೆ ಸ್ವಾಗತಿಸಲಾಗುವುದು. ನಂತರ ಬಿ.ಎಂ.ರಸ್ತೆ, ಸುಭಾಷ್‌ಚೌಕ, ಹೇಮಾವತಿ ಪ್ರತಿಮೆ, ಸಹ್ಯಾದ್ರಿ ಮಾರ್ಗವಾಗಿ ಅರಳೇಪೇಟೆಯಲ್ಲಿನ ಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ನಂದಿಧ್ವಜ ಹಾಗೂ ವಾದ್ಯ ವೃಂದದೊಡನೆ ಮೆರವಣಿಗೆ ಸಾಗಲಿದೆ ಎಂದು ಹೇಳಿದರು. ವೈ.ಎಸ್.ಸಿದ್ದಯ್ಯ, ಎಚ್.ಸಿ.ಯತೀಶ್, ಎಂ.ಎಸ್.ಚಂದ್ರಶೇಖರಯ್ಯ, ಎಚ್.ಕೆ.ಲೋಕೇಶ್ ಶೋಭಾ ಇದ್ದರು.