ಬ್ರಾಹ್ಮಣರು ಗಂಭೀರ ಚಿಂತನೆ ನಡೆಸಬೇಕಿದೆ: ಅಶೋಕ್ ಹಾರನಹಳ್ಳಿ

ಹಾಸನ: ಪ್ರಚಲಿತದಲ್ಲಿ ನಾನಾ ಕ್ಷೇತ್ರಗಳಲ್ಲಿ ಜಾತಿ ಆಧಾರದ ಮೇಲೆ ಹೆಚ್ಚು ಒತ್ತು ನೀಡುತ್ತಿರುವುದರಿಂದ
ಬ್ರಾಹ್ಮಣರು ಸಹ ಈ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ರಾಜ್ಯ ಸರ್ಕಾರದ ಮಾಜಿ
ಜನರಲ್ ಅಡ್ವೋಕೇಟ್ ಅಶೋಕ್ ಹಾರನಹಳ್ಳಿ ಹೇಳಿದರು.
 ಪಟ್ಟಣದ ಸೀತಾರಾಮ ಕಲ್ಯಾಣಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಬಳಗದ ತಾ. ನೂತನ ಘಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸನಾತನ ಕಾಲದಿಂದಲೂ ಬ್ರಾಹ್ಮಣರು ತಮ್ಮದೇ ಆಚಾರ ವಿಚಾರಗಳಿಂದ ವಿಶೇಷ ಸ್ಥಾನಮಾನ ಗಳಿಸಿದ್ದರೂ ಇಂದು ವಿವಿಧ ಕ್ಷೇತ್ರಗಳಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದಾರೆ.
 ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ನೌಕರಿ ಮಾಡುತ್ತಿರುವ ವಿಪ್ರರು ಇಂದು ಅನೇಕ ಒತ್ತಡಗಳನ್ನು ಅನುಭವಿಸುತ್ತಿದ್ದಾರೆ.ಇವುಗಳಿಗೆ ಉತ್ತರ ನೀಡಲು ಅಸಮರ್ಥರಾದ ಸಮಾಜದ ಎಷ್ಟೋ ಜನರು ಸಂಘಟಿತರಾಗದೆ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಆಗಿದೆ ಎಂದರು.
 ತಾಲೂಕಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ  ವಿಪ್ರ ನೌಕರರ ಬಳಗವು ದಾರಿ ದೀಪವಾಗಬೇಕು. ಬ್ರಾಹ್ಮಣ ಸಮಾಜವು ಯಾವುದೇ ಒಂದು ಸಮಾಜದ ವಿರುದ್ಧವಾಗಿ ಈ ಸಂಘಟನೆಯನ್ನು ಮಾಡುತ್ತಿಲ್ಲ. ತನ್ನ ಸಮಾಜದ ನೌಕರರಿಗೆ ಅತ್ಮಸ್ಥೈರ್ಯ
ತುಂಬಲು ಈ ಸಂಘ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
 ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಅಟ್ಟಾವರ ರಾಮದಾಸ್ ಮಾತನಾಡಿ, ವಿಪ್ರ  ಸಮಾಜದವರು ಈಗಲಾದರೂ ಒಟ್ಟಾಗಿ ಸಂಘಟಿತರಾಗಿ ತಮ್ಮ  ವಿವಿಧ ಕ್ಷೇತ್ರಗಳಲ್ಲಿ ನೊಂದ ಬ್ರಾಹ್ಮಣ ಸಮಾಜದ ನೌಕರರಿಗೆ
ಸಾಥ್ ನೀಡಲು ಸಜ್ಜಾಗಿರುವುದನ್ನು ನೋಡಿದರೆ ಯಾವುದೇ ನೌಕರನಿಗೆ ಸ್ಫೂರ್ತಿ ಬರುತ್ತದೆ. ಆದರೆ ಬರೀ ಸಂಘ ಸ್ಥಾಪಿಸಿದರೆ ಸಾಲದು ನಿರಂತರ ಚಟುವಟಿಕೆಗಳ ಮೂಲಕ ಸಂಘ ಜೀವಂತವಾಗಿ ಇಡಬೇಕು ಎಂದು ಕರೆ ನೀಡಿದರು.
 ತಾಲೂಕು ಬ್ರಾಹ್ಮಣ ಸಮಾಜ ಅಧ್ಯಕ್ಷ ಕೆ.ರಮೇಶ್, ತಾ. ವೈದ್ಯಾಧಿಕಾರಿ ಡಾ.ಶೈಲಜಾ, ಚಂದ್ರಶೇಖರ ಭಾರತಿ ವಿದ್ಯಾದತ್ತಿ ಅಧ್ಯಕ್ಷ ಡಾ.ಡಿ.ವಿ.ಗಿರೀಶ್, ಹಾಸನ ಜಿಲ್ಲಾ ತರಬೇತಿ ಸಂಸ್ಥೆ ಉಪಪ್ರಾಂಶುಪಾಲ ಜಾವಗಲ್ ನಾಗರಾಜ್, ತಾ. ವಲಯ ಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿದರು.
 ಡಿವಿಜಿ ಪ್ರಶಸ್ತಿ ವಿಜೇತ ಪತ್ರಕರ್ತ ಬಿ.ಎಸ್.ಸೇತೂರಾಂರನ್ನು ಸನ್ಮಾನಿಸಲಾಯಿತು. ವಿಪ್ರ  ನೌಕರರ ಬಳಗದ ಅಧ್ಯಕ್ಷ ಕೆ.ಆರ್.ಸುರೇಶ್, ಕಾರ್ಯದರ್ಶಿ  ವಿಷ್ಣುಮೂರ್ತಿ ಭಟ್, ಖಜಾಂಚಿ ಅನಂತ.ಜಿ.ವಟಿ, ತಾಲೂಕಿನ ವಿಪ್ರ ನೌಕರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com