ರಾಮನಾಥಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಣನೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ರಾಮನಾಥಪುರದ ಶಿರದನಹಳ್ಳಿ ಸರ್ಕಲ್ ಬಳಿ ಕೊಣನೂರು ಠಾಣಾ ಪೊಲೀಸರು ಗ್ರಾಮ ಗಸ್ತಿನಲ್ಲಿರುವಾಗ ರಾಮನಾಥಪುರದಿಂದ ಬಸವಾಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ರಾಮನಕೊಪ್ಪಲು ಗ್ರಾಮದ ಕುಮಾರ ಎಂಬಾತನನ್ನು ಪೊಲೀಸರು ಬಂದಿಸಿದ್ದಾರೆ.
ಬ್ಯಾಗನ್ನು ಪರಿಶೀಲಿಸಿದಾಗ ಸುಮಾರು 1811.25 ಮೌಲ್ಯದ 90 ಎಂಲ್ನ ಮದ್ಯದ 75 ಟೆಟ್ರಾ ಪ್ಯಾಕೆಟ್ಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಂಗಡಿಯಲ್ಲಿ ಅಕ್ರಮ ಮದ್ಯ: ಮತ್ತೊಂದು ಪ್ರಕರಣದಲ್ಲಿ ಗೊಬ್ಬಳಿ ಗ್ರಾಮದ ಚಿಲ್ಲರೆ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಖಚಿತ ಮಾಹಿತಿ ಮೇರೆಗೆ ಕೊಣನೂರು ಪೊಲೀಸರು ದಾಳಿ ನಡೆಸಿ ಸುಮಾರು 1013.85 ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು, ದಿನೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ