ಅಸಹಾಯಕರಿಗೆ, ನೊಂದವರಿಗೆ ಯುವಶಕ್ತಿ ಸ್ಪಂದಿಸಲಿ

Updated on

ಹಾಸನ: ಯುವಶಕ್ತಿ ಸ್ಪಂದಿಸುವಂತಹ ಮನೋಭಾವನೆಯನ್ನು ತಮ್ಮ ನಿತ್ಯಬದುಕಿನಲ್ಲಿ ನಿರಂತರವಾಗಿ ರೂಢಿಸಿಕೊಳ್ಳುವ ಮೂಲಕ ಅಸಹಾಯಕರಿಗೆ ನೊಂದವರಿಗೆ, ದೌರ್ಜನ್ಯಕ್ಕೆ ಒಳಗಾದವರಿಗೆ ಸದಾ ನೆರವಾಗಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ ತಿಳಿಸಿದರು.
 ನಗರದ ಭಾರತ್ ಸ್ಕೌಟ್ಸ್ ಭವನದ ಆವರಣದಲ್ಲಿ ಭಾರತ್ ಸ್ಕೌಟ್ಸ ಅಂಡ್ ಗೈಡ್ಸ್ ಸಂಸ್ಥೆ, ವಿಶ್ವಮಾನವ ಒಕ್ಕೂಟ, ಅನನ್ಯ ಟ್ರಸ್ಟ್, ಚಿನ್ಮಯಿ ಸೋಲಾರ್ ಸಲ್ಯೂಷನ್, ಸರ್ವೋದಯ ಘಟಕ, ರಾಮದೇವರ ಪುರದ ಶ್ರಿ ವಿವೇಕಾನಂದ ಯುವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಈ ಹಿಂದೆ ನೆಹರು ಯುವ ಕೇಂದ್ರ ಮೂಲಕ ರಾಷ್ಟ್ರೀಯ ಸೇವ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನ ಕಾರ್ಯಾಗಾರಕ್ಕೆ   ಚಾಲನೆ ನೀಡಿ ಅವರು ಮಾತನಾಡಿದರು.
ಜ್ಞಾನವನ್ನು ಬಿತ್ತರಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾತನಾಡಿ, ಆಸಕ್ತ, ಉತ್ಸುಹಕರಿಗೆ, ಜ್ಞಾನವನ್ನು ಬಿತ್ತರಿಸಬೇಕು. ಒಂದು ಬರಹ, ಒಂದು ವೇದಿಕೆ, ಒಂದು ಪುಸ್ತಕ, ಒಂದು ಗೀತೆ, ಜಗತ್ತನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಪೂರಕವಾಗಲಿದೆ ಎಂದರು.
 ತಹಸೀಲ್ದಾರ್ ಮಂಜುನಾಥ್ ಮಾತನಾಡುತ್ತ ಚಿಂತಕರು ಸಮಾಜದ ಏಳಿಗೆಗೆ ಪೂರಕವಾದ ಪ್ರಮುಖ ವಿಷಯಗಳನ್ನು ಆಯ್ಕೆಮಾಡಿಕೊಂಡು ಆ ಮೂಲಕ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.
  ಗಣ್ಯರಿಗೆ ಸನ್ಮಾನ: ವಿಶ್ವ ಮಾನವ ಒಕ್ಕೂಟದ ಅಧ್ಯಕ್ಷ ಹೆಚ್.ಎನ್.ರವಿಕುಮರ್, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಗದಗ್ನ ಷಹಜಹಾನ್ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com