ಕ.ಪ್ರ.ವಾರ್ತೆ, ಬೇಲೂರು, ಆ. 6
ಬೇಲೂರು ಪಟ್ಟಣದ ಹೊರ ವಲಯದ ಹನಮಂತನಗರದಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯ ಗೋವಿಂದಗೌಡ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಡಿ. ಚಂದ್ರೇಗೌಡ, ಜಿ.ಟಿ.ಇಂದಿರಾ ಧರ್ಮಪ್ಪ ಮತ್ತು ತಾಪಂ ಅಧ್ಯಕ್ಷ ಅಬ್ದುಲ್ ಸುಭಾನ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ದರು.
ಅಡುಗೆ ಮನೆ ಪರಿಶೀಲಿದ ಅಧ್ಯಕ್ಷರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟೌನ್ಗೆ ಹೊಗಿದ್ದರು. ಇದರಿಂದ ಕೋಪಗೊಂಡ ಅಧ್ಯಕ್ಷರು ದೂರವಾಣಿ ಮೂಲಕ ಆತನನ್ನು ಕರೆಸಿ ಛೀಮಾರಿ ಹಾಕಿದರು.
ವಾರ್ಡನ್ಗೆ ತರಾಟೆ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ, ರಾತ್ರಿ ವೇಳೆ ಮಕ್ಕಳಿಗೆ ಊಟ ಮತ್ತು ಇನ್ನಿತರ ಸೌಲಭ್ಯವನ್ನು ನೋಡದೆ ಟೌನ್ಗೆ ಏಕೆ ಹೋಗಬೇಕು, ಮಕ್ಕಳಿಗೆ ಮಣ್ಣು ಮಿಶ್ರಿತ ಅಲೂಗಡ್ಡೆ ಮತ್ತು ಹರಕಲು ಚಾಪೆ ನೀಡಿರುವ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ವಸತಿ ಶಾಲೆಯಲ್ಲಿ ಬಯೋವುಟ್ರಿಕ್ ಹಾಜರಾತಿ ಯಂತ್ರ ಬಳಕೆ ಮಾಡುತ್ತಿಲ್ಲ. ಇಂದು 3 ಜನರು ಗೈರು ಹಾಜರಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಲ್ಲಿ ಚೆರ್ಚೆ ಮಾಡುವುದಾಗಿ ತಿಳಿಸಿದರು.
ಸೊಳ್ಳೆಗಳ ತಾಣ: ಜಿಲ್ಲಾ ಪಂಚಾಯ್ತಿ ಸದಸ್ಯೆ ಜಿ.ಟಿ. ಇಂದಿರಾ ಧರ್ಮಪ್ಪ ಮಾತನಾಡಿ, ಹೆಣ್ಣು ಮಕ್ಕಳಿಗೆ ಬೀಸಿ ನೀರು ನೀಡಿದೆ ಮಕ್ಕಳ ಆರೋಗ್ಯದಲ್ಲಿ ಏರು ಪೇರು ಕಂಡಿದೆ. ವಸತಿ ನಿಯಲಗಳ ಕಿಟಕಿ ಗಾಜು ಒಡೆದು ಸೊಳ್ಳೆಗಳ ತಾಣವಾಗಿದೆ. ಅಡುಗೆ ಮಾಡಿದ ಆಹಾರವನ್ನು ತೆರದು ಇಟ್ಟ ಪರಿಣಾಮ ಆಹಾರದಲ್ಲಿ ಹುಳು ತುಂಬಿವೆ ಎಂದ ಎಂದು ವಾರ್ಡನ್ಗೆ ತರಾಟೆಗೆ ತೆಗೆದುಕೊಂಡರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ಸುಭಾನ್ ಮಾತನಾಡಿ, ತಾಲೂಕಿನ ಬಹುತೇಕ ವಸತಿ ನಿಯಲಗಳ ಪರಿಸ್ಥಿತಿ ಹೇಳತೀರದಾಗಿದೆ. ಮೊರಾರ್ಜಿ ವಸತಿ ನಿಲಯ ಕಟ್ಟಿ ವರ್ಷಗಳೇ ಕಳೆದರು ಉದ್ಘಾಟನೆಯಾಗಿಲ್ಲ. ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿದೆ. ಈ ಬಗ್ಗೆ ಗುತ್ತಿಗೆದಾರನ ವಿರುದ್ಧ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದರು.
ಕಾಳಜಿ ವಹಿಸಿ: ಪ್ರತಿ ಮಕ್ಕಳಿಗೆ ಬಿಸಿ ನೀರು ನೀಡಬೇಕು, ಅಯೋಡಿನ್ ಬಳಕೆ ಮಾಡಬೇಕು. ಮಕ್ಕಳಿಗೆ ಹಾಸಿಗೆ ನೀಡುವ ಬಗ್ಗೆ ವಿಷಯ ಪ್ರಸ್ತಾಪ ಮಾಡಲಾಗುವುದು. ಅಧಿಕಾರಿಗಳು ಇಲ್ಲಿಯ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಜಿಪಂ ಅಧ್ಯಕ್ಷೆ ತಾಕೀತು ಮಾಡಿದರು.
Advertisement