ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲು ಇಲ್ಲಿನ ಪಟ್ಟಣ ಪಂಚಾಯಿತಿ ಮುಂದಾಗಿದೆ.
ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ಮತ್ತು ಎಂಜಿನಿಯರ್ ಕವಿತ ಅವರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ಪತ್ತೆ ಮಾಡುವಂತೆ ಸಿಬ್ಬಂದಿವರ್ಗಕ್ಕೆ ಸೂಚಿಸಿದ್ದು, ಬುಧವಾರ ಇಲ್ಲಿನ ಮಲ್ಲಿಪಟ್ಟಣ ರಸ್ತೆಯಲ್ಲಿ ಪತ್ತೆಯಾದ ಕೊಳವೆ ಬಾವಿಯೊಂದನ್ನು ಮುಚ್ಚಿಸಿದರು.
ಮುಚ್ಚಳ ಹಾಕಲು ಸೂಚನೆ: ಇದೇ ವೇಳೆ ಪಟ್ಟಣದ ನಿರ್ಮಾಣ ಹಂತದಲ್ಲಿ ಇರುವ ಉಪ್ಪಾರ ಸಮುದಾಯ ಭವನದ ಸಮೀಪದಲ್ಲಿ ಕೊರೆಸಲಾಗಿರುವ ಕೊಳವೆ ಬಾವಿಗೆ ಮುಚ್ಚಳ ಇಲ್ಲದ ಕಾರಣಕ್ಕೆ ಸಂಬಂಧಪಟ್ಟವರಿಗೆ ಗುರುವಾರ ಮುಚ್ಚಳ ಹಾಕುವಂತೆ ಸೂಚಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದ ಕೊಳವೆ ಬಾವಿಗಳಿದ್ದು, ಗುರುತಿಸಿ ಹೇಳಿದವರಿಗೆ 500 ರು. ಬಹುಮಾನ ನೀಡಲಾಗುವುದು. ಸರ್ಕಾರಿ ಕೊಳವೆ ಬಾವಿಗಳಷ್ಟೇ ಅಲ್ಲದೇ ನಿರುವಯುಕ್ತ ಹಾಗೂ ತೆರೆದ ಕೊಳವೆ ಬಾವಿಗಳು ಖಾಸಗಿ ಸ್ಥಳಗಳಲ್ಲಿ ಇದ್ದರೂ ಪಟ್ಟಣ ಪಂಚಾಯಿತಿಗೆ ತಿಳಿಸಿದರೆ ಅವುಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದಲೇ ಮುಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement