ಜಾವಗಲ್: ಜಾವಗಲ್ ಗ್ರಾಮ ಪಂಚಾಯಿ ವ್ಯಾಪ್ತಿಯ ರಾಮಕೃಷ್ಣಪುರ ದಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದರಿಮದ ಕೊಳವೆ ಬಾವಿ ತೆರೆಸಲಾಗಿತ್ತು. ಆದರೆ ಈ ಕೊಳವೆ ಬಾವಿಯಲ್ಲಿ ನೀರು ಬಾರದ್ದರಿಂದ ಇದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಈ ಜಾಗದಲ್ಲಿ ಶಾಲಾ ಮಕ್ಕಳು ದಿನವೂ ಆಟವಾಡುತ್ತಾರೆ. ಇದರಿಂದಾಗಿ ಎಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭೀತಿಯಲ್ಲಿ ಪೋಷಕರು ಇದ್ದಾರೆ.
ಈ ಕೊಳವೆ ಬಾವಿಯಲ್ಲಿ ನೀರು ಬಾರದಿದ್ದರೆ ತಕ್ಷಣ ಮುಚ್ಚುವ ಕೆಲಸವನ್ನಾದರೂ ಮಾಡ ಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಮಾಡಿಲ್ಲ ಎಂದು ಕರವೇ ಹೋಬಳಿ ಘಟಕದ ಕಾರ್ಯದರ್ಶಿ ಭಾನುಪ್ರಕಾಶ್ ದೂರಿದ್ದಾರೆ. ಈಗಾಗಲೇ ಕೊಳವೆ ಬಾವಿಗೆ ಮಕ್ಕಳು ಬಿದ್ದಿರುವ ಪ್ರಕರಣಗಳು ಎಲ್ಲೆಡೆ ಹೆಚ್ಚಾಗುತ್ತಿದೆ ಗ್ರಾಮ ಪಂಚಾಯ್ತಿಯವರು ಕಾರ್ಯ ಪ್ರವೃತ್ತರಾಗಿ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿದ್ದಾರೆ.
Advertisement