ಹಾಸನ: ಬೇಲೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ)ಸಂಘಗಳ ಕಟ್ಟಡ ಉದ್ಘಾಟನಾ ಸಮಾರಂಭವು ಆ.7ರಂದು ನಡೆಯಲಿದೆ.
ಸಮಾರಂಭದಲ್ಲಿ ಹಾಸನ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಬೇಲೂರು ಕ್ಷೇತ್ರ ಶಾಸಕ ವೈ.ಎನ್.ರುದ್ರೇಶಗೌಡರು ಭಾಗವಹಿಸುವರು. ಆ.7ರಂದು ಬೆಳಿಗ್ಗೆ 8.30ಕ್ಕೆ ಅಡವಿಬಂಟೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ, ಬೆಳಿಗ್ಗೆ 9ಕ್ಕೆ ಅಂಗಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಉದ್ಘಾಟನೆ, ಬೆಳಿಗ್ಗೆ 9.15ಕ್ಕೆ ಹನಿಕೆ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ, ಬೆಳಿಗ್ಗೆ 11 ಗಂಟೆಗೆ ಚೀಲನಾಯ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ, ಬೆಳಿಗ್ಗೆ 11.30ಕ್ಕೆ ಹಳೇಬೀಡು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ, ಮಧ್ಯಾಹ್ನ 12 ಗಂಟೆಗೆ ಹಿರೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಉದ್ಘಾಟನೆ.
Advertisement