ಹಾಸನ: ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬರಗೂರು ಹ್ಯಾಂಡ್ ಪೋಸ್ಟ್, ಚನ್ನರಾಯಪಟ್ಟಣ ತಾಲೂಕು ಈ ಸಹಕಾರ ಸಂಘವು ಹಾಲಿ ಸಮಾಪನೆಯಲ್ಲಿದ್ದು ಸಂಘದ ನೋಂದಣಿಯನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ.
ಆ. 20ರಂದು ಬೆಳಿಗ್ಗೆ 11 ಕ್ಕೆ ಚನ್ನರಾಯಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ಸಂಘದ ಅಂತಿಮ ಮಹಾ ಸಭೆಯನ್ನು ಕರೆಯಲಾಗಿದೆ.
ಈ ಸಹಕಾರ ಸಂಘದ ಬಗ್ಗೆ ಆಸಕ್ತಿವುಳ್ಳವರು ಆಕ್ಷೇಪಣೆಗಳು ಇದ್ದಲ್ಲಿ ಸಂಘದ ಷೇರುದಾರರೆಂದು ಸಾಬೀತುಪಡಿಸಿಕೊಳ್ಳಲು ದಾಖಲೆಗಳೊಂದಿಗೆ ಈ ಸಾರ್ವಜನಿಕ ಪ್ರಕಟಣೆಯ ದಿನಾಂಕದಿಂದ 3 ದಿನಗಳೊಳಗೆ ಬರಗೂರು ಹ್ಯಾಂಡ್ಪೋಸ್ಟ್ನ ಹಾಲು ಉತ್ಪಾದಕರ ಸಹಕಾರ ಸಂಘ ನಿ.ದ ಸಮಾಪನಾಧಿಕಾರಿ ಹಾಗೂ ಚನ್ನರಾಯಪಟ್ಟಣ ಸಹಕಾರ ಅಭಿವೃದ್ಧಿ ಅಧಿಕಾರಿ ಇವರನ್ನು ಖುದ್ದು ಸಂಪರ್ಕಿಸುವಂತೆ ತಿಳಿಸಿದ್ದಾರೆ.
Advertisement