ಮೈಸೂರು: ಮಹಿಳಾ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪೊಲೀಸ್ ಪೇದೆ ಪರೀಕ್ಷಾ ತರಬೇತಿ ಉದ್ಘಾಟನೆ ಹಾಗೂ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜದಲ್ಲಿ ಪ್ರತಿ ನಿಮಿಷಕ್ಕೆ 1 ಹೆಣ್ಣಿನ ಭ್ರೂಹಣ ಹತ್ಯೆ, 15 ನಿಮಿಷಕ್ಕೊಂದು ಅತ್ಯಾಚಾರ, 40 ನಿಮಿಷಕ್ಕೊಂದು ಲೈಂಗಿಕ ಕಿರುಕುಳ, 16 ನಿಮಿಷಕ್ಕೊಂದು ಕೊಲೆ, 9 ನಿಮಿಷಕ್ಕೊಂದು ಕ್ರೂರ ನಡವಳಿಕೆ, 10 ನಿಮಿಷಕ್ಕೊಂದು ವರದಕ್ಷಿಣೆ ಬಲಿ ಸೇರಿದೆ. ಶೋಷಣೆ ತಪ್ಪಿಸುವಲ್ಲಿ ಎಚ್ಚರ ವಹಿಸಬೇಕು ಎಂದರು.