ಕಾರ್ಯಪಡೆ ತಂಡದಿಂದ ತಾಕು ಪರಿಶೀಲನೆ

Updated on: 

ಆಲೂರು: ಆಲೂರು ತಾಲೂಕಿನಲ್ಲಿ ಅಲ್ಲಲ್ಲಿ ಆಲೂಗೆಡ್ಡೆ ಬೆಳೆಗೆ ನುಸಿ ಬಾಧೆಯಿಂದ ಬರುವ, ಕರಿ ಕಡ್ಡಿ ರೋಗ ಕಾಣಿಸಿಕೊಂಡಿದೆ. ಎಲೆಗಳು ಕೆಳಮುಖವಾಗಿ ಮುದುಡಿಕೊಂಡು, ನಂತರ ಕಪ್ಪಾಗಿ ಕಡ್ಡಿಗಳು ಮಾತ್ರ ಉಳಿಯುತ್ತಿವೆ.
ತಾಲೂಕಿನ  ನಾಕಲಗೋಡು ಗ್ರಾಮಕ್ಕೆ  ಭೇಟಿ ನೀಡಿದ್ದ ಆಲೂಗೆಡ್ಡೆ ಕಾರ್ಯಪಡೆ ತಂಡವು  ಸೋಮೇಗೌಡ ಎಂಬವರು ಬೆಳೆದಿದ್ದ ಆಲೂ ಬೆಳೆ ತಾಕಿನಲ್ಲಿ ಪರಿಶೀಲನೆ ನಡೆಸಿದರು. ರೋಗದ ಹತೋಟಿಗೆ ಡೈಕೋಫಾಲ್ ಔಷಧಿಯನ್ನು 2 ಮೀ. ಲೀಟರ್ ಪ್ರತಿ ಲೀಟರಿಗೆ ಬೆರೆಸಿ ಎಲೆಗಳಿಗೆ ಸಿಂಪಡಿಸುವುದು. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಇರುವುದರಿಂದ, ಈಗಾಗಲೇ ಜಿಲ್ಲೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿರುವುದರಿಂದ ಆಲೂರು ತಾಲೂಕಿನ ರೈತರು ಮುಂಜಾಗ್ರತವಾಗಿ ಮ್ಯಾಂಕೋಜೆಬ್ ಔಷಧಿಯನ್ನು 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ತಳಭಾಗಕ್ಕೆ ತಗಲುವಂತೆ ಸಿಂಪಡಿಸಬೇಕು ಎಂದು ತಿಳಿಸಿದರು.
ಅಂಗಮಾರಿ ರೋಗ ಲಕ್ಷಣಗಳು ಅಂದರೆ ನೀರಿನಿಂದ ತೊಯ್ದಂತಹ ಚುಕ್ಕೆಗಳು ಎಲೆಗಳ ಮೇಲೆ ಕಾಣಿಸಿಕೊಂಡರೆ, ಮ್ಯಾಕ್ಯೀಮೇಟ್ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ತೋಟಗಾರಿಕೆ ಇಲಾಖೆಯಲ್ಲಿ ಆಲೂಗೆಡ್ಡೆ ವಿಶೇಷ ಪ್ಯಾಕೇಜ್ ಅಡಿ ರೈತರಿಗೆ ಶೇ. 50 ಸಹಾಯಧನದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ರೈತರು ಇದರ ಸದುಉಪಯೋಗ ಪಡಿಸಿಕೊಂಡು ಆಲೂಗೆಡ್ಡೆ ಬೆಳೆಯನ್ನು ಉಳಿಸಿಕೊಳ್ಳಲು ಕೋರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com