ದೌರ್ಜನ್ಯದ ವಿರುದ್ಧ ಸದಾ ಜಾಗೃತರಾಗಿ

Updated on: 

ಸಕಲೇಶಪುರ: ಮಹಿಳೆಯರು ಜಾಗೃತರಾದರೆ ಮಾತ್ರ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗುವುದು ಸಾಧ್ಯವೆಂದು ಡಿವೈಎಸ್‌ಪಿ ಸ್ನೇಹಾ ಹೇಳಿದರು.  ಪಟ್ಟಣದ ಜೆಎಸ್‌ಎಸ್ ನರ್ಸಿಂಗ್ ಹಾಗೂ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೌರ್ಜನ್ಯ ಬಹಿರಂಗಪಡಿಸಿ: ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ಭಯದಿಂದ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುವುದರಿಂದ ದೌರ್ಜನ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಆದ್ದರಿಂದ ಮಹಿಳೆಯರು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನಿರ್ಭೀತರಾಗಿ ಹೊರಗೆ ತಂದಲ್ಲಿ ಮಾತ್ರ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿ ಸಾಧ್ಯ ಎಂದರು.  ಆರಕ್ಷಕ ವೃತ್ತ ನಿರೀಕ್ಷಕ ಗುರುರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಅಂತರ್ಜಾಲವನ್ನು ಬಳಸುವುದು ಹೆಚ್ಚಾಗಿದ್ದು ಇದರಿಂದ ಬಳಕೆದಾರರಿಗೆ ಎರಡು ರೀತಿಯ ಪರಿಣಾಮಗಳಾಗುತ್ತಿದೆ. ಅಂತರ್ಜಾಲ ಬಳಕೆಯಿಂದ ಕೆಲವರಿಗೆ ಒಳ್ಳೆಯ ಪರಿಣಾಮ ಬೀರಿದರೆ ಇನ್ನು ಕೆಲವರಿಗೆ ದುಷ್ಪಾರಿಣಾಮ ಬೀರುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಂತರ್ಜಾಲವನ್ನು ಒಳ್ಳೆಯ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕು ಎಂದು ಅವರು ಹೇಳಿದರು.
ಅಂತರ್ಜಾಲ ಸದ್ಬಳಕೆಯಾಗಲಿ: ಇದೇ ರೀತಿ ವ್ಯಾಟ್ಸ್ ಅಪ್, ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳನ್ನು ಬಳಸುವಾಗ ವಿದ್ಯಾರ್ಥಿನಿಯರು ಅತಿ ಎಚ್ಚರವಾಗಿರಬೇಕು. ಇತ್ತೀಚೆನ ದಿನಗಳಲ್ಲಿ ಮಹಿಳೆಯರ ಮೇಲೆ ಹಾಗೂ ಮಕ್ಕಳ ಮೇಲೆ ಬಹುತೇಕ ಲೈಂಗಿಕ ದೌರ್ಜನ್ಯಗಳು ಅವರಿಗೆ ಆಪ್ತರು ಎನಿಸಿಕೊಳ್ಳುವ ವ್ಯಕ್ತಿಗಳಿಂದಲೇ ಆಗುತ್ತಿರುವುದು ವಿಷಾದನಿಯ ಎಂದರು.  ಈ ಸಂದರ್ಭದಲ್ಲಿ ನಗರ ಠಾಣೆಯ ಆರಕ್ಷಕ ನಿರೀಕ್ಷಕ ಜೀವನ್, ಕಾಲೇಜಿನ ಪ್ರಾಂಶುಪಾಲ ವಿನೋಲಿಯಾ ರಾಜ್, ಗುರುಮೂರ್ತಿ ಸೇರಿದಂತೆ ವಿವಿಧ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com