ಹಾಸನ: ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನರಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ನಡುವೆಯೇ ತಾಲೂಕಿನ ಹ್ಯಾರಾನೆ ಗ್ರಾಮದಲ್ಲಿ ನಾಯಿಗಳ ಗುಂಪು ನಡೆಸಿದ ದಾಳಿಯಲ್ಲಿ ಮೃತಪಟ್ಟಿದೆ. ರತ್ನಮ್ಮ ಎಂಬುವರಿಗೆ ಸೇರಿದ ಈ ಕರುವನ್ನು ಜಮೀನಿನ ಬಳಿ ಕಟ್ಟಿದ್ದ ಸಂದರ್ಭದಲ್ಲಿ ಶ್ವಾನಗಳ ಗುಂಪು ದಾಳಿ ನಡೆಸಿದ್ದರಿಂದ ರಕ್ತ ಸ್ರಾವವಾಗಿ ಮೃತಪಟ್ಟಿದೆ.
ಗ್ರಾಮಗಳಲ್ಲೂ ಸಮಸ್ಯೆ: ಚನ್ನಂಗಿಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಎಂ.ಶಿವಣ್ಣ ಅವರು ಘಟನೆ ಕುರಿತು ಮಾತನಾಡಿ, ಬೀದಿ ನಾಯಿಗಳ ಹಾವಳಿ ಕೇವಲ ನಗರಗಳಿಗಷ್ಟೇ ಸೀಮಿತವಾಗದೆ ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲೂ ಸಮಸ್ಯೆಯಾಗಿದೆ ಎಂದರು. ಕರುವಿನ ಮಾಲೀಕರಾದ ರತ್ನಮ್ಮ ಅವರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.