ಜೂಜಾಟ: ಆರು ಮಂದಿ ಬಂಧನ

Updated on: 

ಹಾಸನ: ಜಿಲ್ಲೆಯ ನಾನಾ ಕಡೆ ಅಂದರ್ ಬಾಹರ್ ಆಡುತ್ತಿದ್ದ 6 ಆರೋಪಿಗಳನ್ನು ಬಂಧಿಸಿರುವ ಪೊಲೀಸರು 4070 ನಗದನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿ  ಮೊಸಳೆ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಅಂದರ್ ಬಾಹರ್ ಆಡುತ್ತಿದ್ದ    ಗ್ರಾಮದ ರಾಜಶೇಖರಯ್ಯ (46), ಮಹಂತೇಶ (70), ಹಾಲಪ್ಪ (41), ಮಧು (36) ಎಂಬವರನ್ನು ಬಂಧಿಸಲಾಗಿದೆ.
ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2970 ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅರಕಲಗೂಡು ಅಂಜನಾದ್ರಿ ಲಾಡ್ಜ್ ಹಿಂಬದಿಯ ಫಾರೆಸ್ಟ್ ಇಲಾಖೆಯ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದ ಪಟ್ಟಣದ ಬೈಪಾಸ್ ರಸ್ತೆ ವಾಸಿ ನೇಮತ್ (24), ಕೋಟೆ ಬಡಾವಣೆಯ ರಾಮು (38) ಎಂಬವರನ್ನು  ಬಂಧಿಸಲಾಗಿದೆ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1100 ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com