ಜೂಜಾಡುತ್ತಿದ್ದವರ ಬಂಧನ

Updated on: 

ಕನ್ನಡಪ್ರಭ ವಾರ್ತೆ    ಬೇಲೂರು    ಜು. 30
ಅಂದರ್ ಬಾಹರ್ ಜೂಜಾಡುತ್ತಿದ್ದ 4 ಜನರನ್ನು ಬಂಧಿಸಿರುವ ಪೊಲೀಸರು 730 ರು. ನಗದು ಮತ್ತು 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
 ಪಟ್ಟಣದ ಯಗಚಿ ಸೇತೆಯ ಇಟ್ಟಿಗೆ ಗೂಡಿನ ಹಿಂಭಾಗದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಪಟ್ಟಣದ ಪುರಿಭಟ್ಟಿಬೀದಿಯ ವಾಸಿ ಆರೀಫ್ (35), ಮಸೀದಿ ಬೀದಿಯ ಪರ್ವೀಜ್ (35), ಗಣೇಶ್ (33), ಚಿಕ್ಕಮಗಳೂರಿನ ರಿಯಾಜ್ (34) ಎಂಬವರನ್ನು  ಬಂಧಿಸಿ, ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ನಾಪತ್ತೆ
ರಾಮನಾಥಪುರ: ಇಲ್ಲಿನ ನಿವಾಸಿ ನಾಗೇಂದ್ರ ಎಂಬವರ ನಾದನಿ ಭವ್ಯ (19) ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ಹಿಂತಿರುಗುತ್ತಿಲ್ಲ ಎಂದು ದೂರು ನೀಡಲಾಗಿದೆ. 5.3 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳುವಾದ ಶರೀರ, ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಮೆರೂನ್ ಬಣ್ಣದ ಟಾಪ್ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಈಕೆಯ ಸುಳಿವು ದೊರೆತಲ್ಲಿ ಕೊಣನೂರು ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
ಯುವತಿ ನಾಪತ್ತೆ
ಕನ್ನಡಪ್ರಭ ವಾರ್ತೆ    ಅರಸೀಕೆರೆ    ಜು. 30
ತಾಲೂಕಿನ ಜಾವಗಲ್ ಹೋಬಳಿಯ  ಚಿಕ್ಕಲಿಂಗನಹಳ್ಳಿ ಗ್ರಾಮದ ಚಂದ್ರಪ್ಪ ಎಂಬವರ  ಪುತ್ರಿ ರಂಜಿತ (25)  ಮನೆಯಿಂದ ಹೊರಗೆ ಹೋದವರು ಹಿಂತಿರುಗಿಲ್ಲ. ಕನ್ನಡ  ಮಾತನಾಡುವ ಈಕೆಯ ಪತ್ತೆಯಾದಲ್ಲಿ ಜಾವಗಲ್ ಠಾಣೆ ಫೋನ್ ನಂ. 08174-271221 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com