ಹಾಸನ: ಒಆರ್ಎಸ್ ಮತ್ತು ಜಿಂಕ್ ಬಳಕೆಯಿಂದ ಶಿಶುವಿನ ಭೇದಿ ನಿಯಂತ್ರಿಸಿವುದಲ್ಲದೆ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣ ಕೊಠಡಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಓಆರ್ಎಸ್ ಮತ್ತು ಜಿಂಕ್ (ಜೋಡಿ ನಂ.1) ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಸಾರ ತಡೆಗಟ್ಟಲು ಭಾರತ ಸರ್ಕಾರ ಜೋಡಿ ನಂ.1 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಆರೋಗ್ಯ ಇಲಾಖೆಯ ಎಚ್.ಎಲ್. ಜನಾರ್ದನ್ ಮಾತನಾಡಿ, ಅತಿಸಾರದಿಂದ ಶೂನ್ಯ ಸಾವು ಎಂಬ ಅಂತಿಮ ಧ್ಯೇಯದೊಂದಿಗೆ ಜು. 28ರಿಂದ ಆಗಸ್ಟ್ 8ರವರೆಗೂ ಅತಿಸಾರಭೇದಿ ತೀವ್ರತರ ನಿಯಂತ್ರಣ ಪಕ್ಷ ಆಚರಣೆಯನ್ನು ಆಯೋಜಿಸಲಾಗಿದೆ ಎಂದರು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣ್ ಮಾತನಾಡಿದರು. ಜಿಪಂ ಅಧ್ಯಕ್ಷೆ ಭಾಗ್ಯ, ಡಿಎಚ್ಒ ಅಧಿಕಾರಿ ಶ್ಯಾಮಲ ದೇವಿ, ಶಸ್ತ್ರ ಚಿಕಿತ್ಸಕ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಂಕರ್, ಶಬ್ಬೀರ್ ಅಹಮದ್, ಹಿಮ್ಸ್ ನಿರ್ದೇಶಕ ರಾಚೇಗೌಡ, ಮಕ್ಕಳ ವಿಭಾಗದ ಪ್ರಸನ್ನ ಕುಮಾರ್, ಮಹಿಳಾ ಮಕ್ಕಳ ವಿಭಾಗದ ಶಿವಸ್ವಾಮಿ, ಮಣಿ ಆಸ್ಪತ್ರೆ ವೈದ್ಯ ದಿನೇಶ್ ಇತರರು ಇದ್ದರು.