ಹಾವೇರಿ: ಮತದಾರರ ಜಾಗೃತಿಗಾಗಿ ಸೋಮವಾರ ನಗರದ ಆಕಾಶದಲ್ಲಿ ಸುತ್ತಾಡಿ, ಭಿತ್ತಿಪತ್ರಗಳ ಮಳೆ ಸುರಿಸಿ ಹಾವೇರಿ ನಾಗರಿಕರ ಕುತೂಹಲಕ್ಕೆ ಕಾರಣವಾಗಿದ್ದ ಪ್ಯಾರಾಗ್ಲೈಡರ್ ಮಂಗಳವಾರವೂ ಕೆಲಕಾಲ ಸುತ್ತಾಡಿ ಭಿತ್ತಿಪತ್ರ ಉದುರಿಸಿತು. ಬೆಳಗ್ಗೆ 6 ಗಂಟೆಯಿಂದ ಗಾಳಿ ಬೀಸುವ ವೇಗದಲ್ಲಿ ಏರಿಳಿತವಿದ್ದ ಕಾರಣ ಸ್ಥಿರ ವಾತಾವರಣ ಸಿಗದೆ ಹಾವೇರಿ ನಗರದ ಹೊರವಲಯದ ಗ್ರಾಮಗಳ ಮೇಲೆ ಹಾರಾಡುವುದು ಸಾಧ್ಯವಾಗಲಿಲ್ಲ. ಜಿಲ್ಲಾ ಕ್ರೀಡಾಂಗಣದಿಂದ ಮೇಲೆದ್ದ ಪ್ಯಾರಾ ಗ್ಲೈಡರ್ 16 ಕಿ.ಮೀ.ಗಳಷ್ಟು ಸುತ್ತಾಡಿ, ಕೆಳಗಿಳಿಯಿತು. ಪ್ಯಾರಾ ಗ್ಲೈಡರ್‌ಗೆ ಅನುಕೂಲಕರ ವಾತಾವರಣ ಇಲ್ಲದ ಕಾರಣ ಹಾರಾಟವನ್ನು ನಗರಕ್ಕೆ ಸೀಮಿತಗೊಳಿಸಲಾಯಿತೆಂದು ಪೈಲಟ್ ನಿಕೋಲೈಸಿಂಗ್ ಹೇಳಿದರು. ಮತದಾರರ ಜಾಗೃತಿ ಕಾರ್ಯಕ್ರಮ ಅನುಷ್ಠಾನದ ಮೇಲ್ವಿಚಾರಣೆಗೆ ನೇಮಕಗೊಂಡಿರುವ ವೀಕ್ಷಕರಾದ ಗಂಗಪ್ಪ, ಸಹ ವೀಕ್ಷಕರಾದ ನದೀಮ ತೂಫೈಲ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ವೆ. ಮುತ್ತುಕಾಮಾಚ್ಚಿ, ಮತದಾರ ಜಾಗೃತಿ ಕಾರ್ಯಕ್ರಮದ ಅನುಷ್ಠಾನ ಸಮಿತಿ ನೋಡಲ್ ಅಧಿಕಾರಿ ಸಿ.ಪಿ. ಮಾಯಾಚಾರಿ, ತಾಪಂ ಇಓ ಡಾ ಬಸವರಾಜ ಡಿ.ಸಿ., ಮೇಘಾಲಯ ಪ್ಯಾರಾಗ್ಲೈಡರ್ ಅಸೋಷಯೇಷನ್‌ನ ವಾಸುಕಿ ಪ್ರಸಾದ ಉಪಸ್ಥಿತರಿದ್ದರು.
Advertisement