ಸವಣೂರು: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ, ಸಮಯಪ್ರಜ್ಞೆ, ಶಿಸ್ತು ಹಾಗೂ ಆದರ್ಶಗಳನ್ನು ಯುವ ಜನಾಂಗ ಅಳವಡಿಸಿಕೊಳ್ಳಬೇಕೆಂದು ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ಹಿರೇಮಠ ನುಡಿದರು.
ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ವೋದಯ ದಿನಾಚರಣೆ ಅಂಗವಾಗಿ ಜ್ಯೋತಿ ಮಹಿಳಾ ಮಂಡಳ ಆಸ್ಪತೆಯ ರೋಗಿಗಳಿಗೆ ಹಣ್ಣು, ಹಾಲು ವಿತರಿಸಿ ಅವರು ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ಎಸ್.ಕೆ. ಅವರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಎಫ್.ಎಂ. ಸಾಲಿಮಠ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳಾದ ಅಲಕಾ ಸಿಂಧೂರ, ಲೀಲಾವತಿ ಗಾಣಗೇರ, ನಿರ್ಮಲಾ ಪಾಟೀಲ, ಲಲಿತಾ ಬುಶೆಟ್ಟಿ, ರಾಜೇಶ್ವರಿ ಬುಶೆಟ್ಟಿ, ದಿಲ್ಶಾದ್ ಮನಿಯಾರ್, ಅನಿತಾ ಗಾಣಗೇರ, ಪ್ರಿಯಾಂಕಾ ಸಿಂಧೂರ, ರಾಜೇಶ್ವರಿ ಬೆಣ್ಣಿ, ಶಶಿಕಲಾ ಮಠಪತಿ, ಉಷಾ ರಾಯ್ಕರ, ಜಯಶ್ರೀ ಕಿರೇಸೂರ, ಕುಸುಮಾ ಗುಂಜಳ, ಲೀಲಾ ಬುಶೆಟ್ಟಿ, ಸರೋಜಾ ರಾಯ್ಕರ, ಪುಷ್ಪಾ ಅಯ್ಯನಗೌಡ್ರ ಉಪಸ್ಥಿತರಿದ್ದರು.