ಆರಾಧನಾ ಮಹೋತ್ಸವ

Updated on: 

ಸವಣೂರು: ನಗರದ ಶ್ರೀಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ದಾಸಶ್ರೇಷ್ಠ ಗೋಪಾಲದಾಸರ ಆರಾಧನಾ ಮಹೋತ್ಸವ 2 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು. ಅಷ್ಟೋತ್ತರ, ರಥೋತ್ಸವ, ಪಂಚಾಮೃತ, ಹಸ್ತೋದಕ ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಅಷ್ಟಾವಧಾನ ಸೇವಾ, ಪಲ್ಲಕ್ಕಿ ಉತ್ಸವ ಕೈಗೊಳ್ಳಲಾಯಿತು.
ರಾಜ್ಯ ಮಟ್ಟಕ್ಕೆ ಆಯ್ಕೆ
ಹಿರೇಕೆರೂರು: ತಾಲೂಕಿನ ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾರ್ರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನಗಳ ಸಹಯೋಗದಲ್ಲಿ ಜರುಗಿದ ಶಿಕ್ಷಕರಿಗಾಗಿ ಸಹಪಠ್ಯತೇರ ಚಟುವಟಿಕೆಗಳ ಸ್ಪರ್ರ್ಧೆಯಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರೌಢಶಾಲೆ ವಿಭಾಗದಲ್ಲಿ ಹಿರೇಕೆರೂರು ತಾಲೂಕಿನ ಯಡಗೋಡಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪರಮೇಶಪ್ಪ ಹುಲ್ಮನಿ, ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಟ್ಟಣದ ಕೌರವ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕ ರಮೇಶ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಿಕ್ಷಕರನ್ನು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಸಿ. ಆನಂದ, ಸಮನ್ವಯಾಧಿಕಾರಿ ಎಸ್. ಸುರೇಶಕುಮಾರ ತಾಲೂಕಿನ ಶಿಕ್ಷಕ ಬಳಗದವರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com