ಹಾನಗಲ್ಲ: ಇಲ್ಲಿನ ಶ್ರೀ ಕುಮಾರೇಶ್ವರ ಕಬಡ್ಡಿ ಕ್ಲಬ್ ತಾಲೂಕು ಕ್ರೀಡಾಂಗಣದಲ್ಲಿ ಫೆ. 9 ಹಾಗೂ 10ರಂದು ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ. ಫೆ. 9ರಂದು ಸಂಜೆ 4ಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಪಂದ್ಯಾವಳಿ ಉದ್ಘಾಟಿಸುವರು. ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಎಂ. ಉದಾಸಿ, ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಮನೋಹರ ತಹಶೀಲ್ದಾರ್, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಕಲ್ಯಾಣಕುಮಾರ ಶೆಟ್ಟರ್, ಅನಂತ ವಿಕಾಸ ನಿಂಗೋಜಿ, ಅನಿಲ ನಾಯಕ್, ಡಾ ವಿ.ಎಂ. ಕುಲಕರ್ಣಿ, ಆರ್. ಪ್ರತಾಪ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಉತ್ತಮ ದಾಳಿಗಾರ, ಹಿಡಿತಗಾರ, ಆಲ್ರೌಂಡರ್ ಹಾಗೂ ತಂಡ ಪ್ರಶಸ್ತಿ ನೀಡಲಾಗುತ್ತಿದೆ. ಮಾಹಿತಿಗೆ ಸಂಪರ್ಕಿಸಿ: ಮೊ. 9008005243, 8971933781, 9986268327.