ಹಾನಗಲ್ಲ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ದಿನಗಳ ಕಾಲ ಸಂಚಾರ ಕೈಕೊಂಡು ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ನಡೆಸಿ, ಇಲ್ಲಿಗೆ ಆಗಮಿಸಿದ ಕಾನೂನು ಸಾಕ್ಷರತಾ ರಥ ಸಂಚಾರವನ್ನು, ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ನ್ಯಾಯಾಧೀಶ ಮದ್ವೇಶ ಡಬೇರ ಸ್ವಾಗತಿಸಿದರು. ಸಂಚಾರದ ಅಂಗವಾಗಿ, ಮೂರು ದಿನಗಳ ಕಾರ್ಯಕ್ರಮದಲ್ಲಿ ತಾಲೂಕಿನ ಹಿರೂರು, ಜಂಗಿನಕೊಪ್ಪ, ಕಲ್ಲಹಕ್ಕಲ, ಶಿವಪೂರ, ಸಾವಿಕೇರಿ, ಚಿಕ್ಕೇರಿ-ಹೊಸಳ್ಳಿ, ಸಾವಸಗಿ ಗ್ರಾಮಗಳಲ್ಲಿ ಕಾನೂನು ಜಾಗೃತಿಯ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜನತಾ ನ್ಯಾಯಲಯಗಳನ್ನು ನಡೆಸಲಾಯಿತು. ಎಲ್ಲ ಕಾರ್ಯಕ್ರಮಗಳಲ್ಲಿ ಹಾನಗಲ್ಲ ನ್ಯಾಯಾಲಯದ ನ್ಯಾಯಾಧೀಶ ಎಂ.ರಾಮಚಂದ್ರ, ಮದ್ವೇಶ ಡಬೇರ ಹಾಗೂ ಕಾನೂನು ವಿಷಯಗಳ ಕುರಿತು ಉಪನ್ಯಾಸ ನೀಡುವ ತಜ್ಞ ವಕೀಲರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಾನಗಲ್ಲ ವಕೀಲರ ಸಂಘದ ಅಧ್ಯಕ್ಷ ರವಿ ವಡೆಯರ, ಸದಸ್ಯ ಬಿ.ಎಸ್. ಅಕ್ಕಿವಳ್ಳಿ, ಕೆ.ಬಿ. ದೊಡ್ಡಮನಿ, ಜಿ.ವಿ. ಕಂಬಾಳಿಮಠ, ಎಂ.ವಿ. ಮಟ್ಟಿಮನಿ, ಎನ್.ಎಸ್. ದೊಡ್ಡಮನಿ, ರಂಗನಾಥ ಅಕ್ಕಿವಳ್ಳಿ, ಎಸ್.ಆರ್. ಕದಂ, ಸಂತೋಷ್ ಬಾಬಜಿ, ರವಿರಾಜ ಹಾದಿಮನಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಸುರೇಶ ಪಕ್ಕೇದ, ಜಯಣ್ಣ, ಜಯಶ್ರೀ ಹಂಚಿನಮನಿ, ರೋಣದ, ಅನಿಲ ಹುಚ್ಚಣ್ಣನವರ, ಕುಬೇರಪ್ಪ, ಶಾಸ್ತ್ರೀ, ತಳಗೇರಿ, ಸೋಮಣ್ಣ ಕಡೂರ, ಗುತ್ತೆಮ್ಮ, ಅನಿತಾ, ಪೂರ್ಣಿಮಾ ಹಾಜರಿದ್ದರು.