ಬಂಕಾಪುರ: ಸಮೀಪದ ಅಂದಲಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮಟ್ಕಾ ದಂಧೆಯಲ್ಲಿ ತೊಡಗಿದ್ದ ಖಾದರಗೌಸ್ ಉರ್ಫ್ ಗಿಡ್ಡುಸಾಬ್ ಮರ್ದಾನಸಾಬ್ ಎಲೆಡಕಿ(ಸಾ. ಅಂದಲಗಿ ಪ್ಲಾಟ್) ಈತನು ಲಾಭಕ್ಕಾಗಿ ರು. 10ಗೆ ರು. 80 ಕೊಡುತ್ತೇನೆಂದು ನಂಬಿಸಿ ಜನರಿಂದ ಹಣ ಪಡೆದುಕೊಂಡು ಜೂಜಾಟ ತೊಡಗಿದ್ದಾಗ ಪೊಲೀಸ್ ಠಾಣೆ ಪಿಎಸ್ಐ ಆರ್.ವೈ. ಭಜಮ್ಮನವರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯಿಂದ ರು. 290 ಹಾಗು ಮಟ್ಕಾ ಸಲಕರಣೆಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.