ಅಪಘಾತ: ಹಲವರಿಗೆ ಗಾಯ

Updated on: 


ಹಾನಗಲ್: ತಡಸ-ಮುಂಡಗೋಡ ರಸ್ತೆ ಮೇಲೆ ಮಂಗಳವಾರ ಸಂಜೆ 6ರ ಸುಮಾರಿಗೆ ತಡಸ ಕಡೆಗೆ ಅತಿವೇಗ, ನಿರ್ಲಕ್ಷ್ಯದಿಂದ ಟಾಟಾ ಏಸ್ ವಾಹನವನ್ನು ಚಲಿಸಿ ನಿಯಂತ್ರಿಸಲಾಗದೆ ರಸ್ತೆಯ ಎಡಗಡೆಗೆ ಪಲ್ಟಿ ಹೊಡೆಸಿದ ಪರಿಣಾಮ ವಾಹನದಲ್ಲಿದ್ದ 14 ಜನ ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ವಾಹನ ಚಾಲಕ ಅರೋಪಿ ಮುಸ್ತಾಕ್ ಗಫಾರಸಾಬ್ ಬೆಂಗಳೂರು ಅವನ ವಿರುದ್ಧ ಅತ್ತಿವೇರಿ ಪಕ್ಷಿಧಾಮದ ಸುಧಾಕರ ಕೃಷ್ಣಪ್ಪ ಕಲವರಾಲ ಹುಬ್ಬಳ್ಳಿ ಹೊಸೂರು ನಿವಾಸಿ ಇವರು ಪೊಲೀಸ್ ಠಾಣೆಗೆ ವರದಿ ನೀಡಿದ್ದು, ತಡಸ ಪೊಲೀಸ್ ಠಾಣೆ ವ್ಯಾಪ್ತಿ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಬೊಲೆರೊ ಅಪಘಾತ: ಗಾಯ
ರಾಣಿಬೆನ್ನೂರು: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪಿಯ ಎನ್‌ಎಚ್-4 ರಸ್ತೆಯ ಮೇಲೆ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ದಾವಣಗೆರೆಯಿಂದ ಹಾವೇರಿ ಕಡೆಗೆ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವೇಳೆ ದನಗಳು ರಸ್ತೆಗೆ ಅಡ್ಡ ಬಂದಾಗ ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಬ್ಬಿಣದ ಸರಳಿಗೆ ಬುಲೆರೊ ವಾಹನ ಡಿಕ್ಕಿ ಹೊಡೆಸಿದ ಪರಿಣಾಮ ವಾಹನದಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಜರುಗಿದೆ. ಚನ್ನಪ್ಪ ಶಂಕರಪ್ಪ ಮಲ್ಲಾಡದ, ಕರಬಸಪ್ಪ ಹೇಮಗಿರಿಯಪ್ಪ ಸೋಮಾಪುರ, ವೀರಬಸಯ್ಯ ಚನ್ನಬಸಯ್ಯ ಗುರುದೇವರಮಠ ಇವರಿಗೆ ತೀವ್ರ ಸ್ವರೂಪದ ಗಾಯಗಳಾದ ಪರಿಣಾಮ ಕರಬಸಪ್ಪ ಹೇ. ಸೋಮಾಪುರ ಸಾ: ಕಳ್ಳಿಹಾಳ ಇವರು ಕಳ್ಳಿಹಾಳ ಗ್ರಾಮದವನಾದ ಅರೋಪಿ ಷಣ್ಮುಕಪ್ಪ ಗಣೇಶಪ್ಪ ಕೊಲ್ಲಾಡದ ವಿರುದ್ಧ ಪ್ರಕರಣ ದಾಖಲಿಸಿದ್ದು, ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಬೈಕ್ ಕಳ್ಳತನ: ದೂರು
ಸವಣೂರು: ತಾಲೂಕಿನ ಹೂವಿನಶಿಗ್ಲಿ ಗ್ರಾಮದಲ್ಲಿ ಜ. 14ರಂದು ರಾತ್ರಿ 8ರಿಂದ 9ರೊಳಗೆ ಹೂವಿನಶಿಗ್ಲಿ ವೀರಕ್ತಮಠ ಜಾತ್ರೆ ವೇಳೆ ಮಠದಿಂದೆ ನಿಲ್ಲಿಸಿದ ವೇಳೆ ಜರುಗಿದೆ. ರು. 20 ಸಾವಿರ ಮೌಲ್ಯದ ಹಿರೋಹೊಂಡಾ ಬೈಕ್ (ಕೆಎ-14, ಕ್ಯೂ-6813) ಬ್ಯಾಡಗಿ ಮೂಲದ ರಾಜಶೇಖರ ವೀ. ಅಂಗಡಿ ಇವರಿಗೆ ಸೇರಿದ್ದು, ರಾಜಶೇಖರ ವೀ. ಅಂಗಡಿ ಇವರು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಠಾಣೆಯ ಪಿಎಸ್‌ಐ ತನಿಖೆ ಕೈಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com