ಬ್ಯಾಡಗಿ: ಸುಮಾರು 20 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬಿದ್ದಿರುವ ಪಟ್ಟಣದ ಕುಡಿಯುವ ನೀರಿನ ಹೊಂಡದ ಪೂರ್ವ ಭಾಗದ ತಡೆಗೋಡೆಯನ್ನು ರಾಜಕೀಯ ಮುಖಂಡರು ಶುಕ್ರವಾರ ವೀಕ್ಷಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭೆ ಸದಸ್ಯರು ಆಗಮಿಸಿದ್ದರು.
ಗೋಡೆ ಕುಸಿದಿದ್ದರಿಂದ ಪಕ್ಕದ ನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲ. ವದಂತಿಗಳಿಗೆ ಕಿವಿಗೊಡದೆ ಧೈರ್ಯದಿಂದ ಇರಿ. ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಮಾಜಿ ಶಾಸಕ ಸುರೇಶಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಆಗ್ರಹಿಸಿದರು. ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಮಂಜುನಾಥ ಭೋವಿ, ಪ್ರಶಾಂತ್ ಯಾದವಾಡ, ದಾನಪ್ಪ ಚೂರಿ, ರೈತರಿದ್ದರು.
Advertisement