ತ್ಯಾಜ್ಯ ವಿಲೇವಾರಿಗೊಳಿಸಿ: ಡಿಸಿ

Updated on: 

ಹಾವೇರಿ: ಪಟ್ಟಣದಲ್ಲಿ ಬಯೋ ಮೆಡಿಕಲ್ ತ್ಯಾಜ್ಯ ಉತ್ಪಾದನೆ ಶೂನ್ಯವೆಂದು ತಿಳಿಸಲಾಗಿದೆ. ಕಾನೂನು ಪ್ರಕಾರ ಬಯೋ ಮೆಡಿಕಲ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿಲ್ಲ ಹಾಗೂ ಈ ಕುರಿತು ವೀಕ್ಷೆಣೆ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ ಹೇಳಿದರು.
ಅವರು ಜಿಪಂ ಸಭಾಂಗಣದಲ್ಲಿ ಜರುಗಿದ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮಕೈಕೊಳ್ಳಲಾಗುವುದು ಹಾಗೂ ಬಯೋ ಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗುವ ಯಾವುದೇ ಕೇಂದ್ರಗಳಿಗೆ ಕಾನೂನಿನಡಿಯಲ್ಲಿ ವಿನಾಯಿತಿ ನೀಡಲಾಗುವುದಿಲ್ಲ ಲೋಕ ಅದಾಲತ್‌ನ ಪ್ರಕರಣಗಳನ್ನು ಮತ್ತು ಜಿಲ್ಲಾ ನ್ಯಾಯಾಧೀಶರು ನೀಡಿದ ಕಚೇರಿಯ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ನ್ಯಾಯಾಧೀಶರು ಸೂಚಿಸಿದ ಎಲ್ಲಾ ಅಂಶಗಳನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾಯಾಧೀಶ ಶ್ರೀಶಾನಂದ ಅವರು ಮಾತನಾಡಿ, ನ್ಯಾಯಾಲಯಗಳಲ್ಲಿ ನ್ಯಾಯ ಬೇಡಿ ಪ್ರಕರಣಗಳನ್ನು ದಾಖಲಿಸಿ ವಿನಾಕಾರಣ ಅಲೆಯುವ ಬದಲು ಪರಸ್ಪರ ಹೊಂದಾಣಿಕೆ ಮೂಲಕ ಕಕ್ಷಿದಾರರು ರಾಜಿ ಸಂದಾನಕ್ಕೆ ಮುಂದಾಗಬೇಕು. ರಾಜಿ ಮೂಲಕ ಪ್ರಕರಣಗಳು ಇತ್ಯರ್ಥವಾಗುವುದರಿಂದ ಕಕ್ಷಿದಾರರಿಬ್ಬರಿಗೂ ಹಣ ಹಾಗೂ ಸಮಯದ ಉಳಿತಾಯವಾಗುತ್ತದೆ. ಅಲ್ಲದೆ ಸಮಾಜದಲ್ಲಿ ವ್ಯಕ್ತಿಗಳ ಮಧ್ಯೆ ಸೌಹಾರ್ದಯುತ ವಾತಾವರಣ ಏರ್ಪಡಲು ಕಾರಣವಾಗುತ್ತದೆ.
ಅದಾಲತ್‌ಗಳಲ್ಲಿ ಒಮ್ಮೆ ತೀರ್ಪು ಪ್ರಕಟಗೊಂಡರೆ ಅದೇ ಅಂತಿಮವಾಗುತ್ತದೆ. ಅದನ್ನು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುವುದಿಲ್ಲ. ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಆದೇಶದಂತೆ ಈ ರಾಷ್ಟ್ರೀಯ ಅದಾಲತ್ ದೇಶದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ನಡೆಯುವುದರಿಂದ ಹಾಲಿ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಹಾಗೂ ನ್ಯಾಯಾಲಯದಲ್ಲಿ ಹೊಸದಾಗಿ ದಾಖಲಾದ ಪ್ರಕರಣಗಳನ್ನು ಲೋಕದಲಾತ್ ಮೂಲಕ ಬಗೆ ಹರಿಸಿಕೊಳ್ಳುವುದರಲ್ಲಿ ಕಕ್ಷಿದಾರರ ಹಿತ ಅಡಗಿದೆ ಎಂದರು.
ಜಿಪಂ ಸಿಇಒ ಕೆ.ಬಿ. ಆಂಜನಪ್ಪ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com