ಹಾವೇರಿ: ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಸ್ಥಳೀಯ ಸಮಿತಿ ಆಶ್ರಯದಲ್ಲಿ ಇಲ್ಲಿಯ ಹೆಸ್ಕಾಂ ಆವರಣದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಸಂಘಟನಾ ಸಭೆ ಮತ್ತು ನಿವೃತ್ತ ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ನಡೆಯಿತು. ಕವಿಪ್ರನಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮತ್ತು ಎಲ್ಲ ವಿದ್ಯುತ್ ಕಂಪನಿಗಳ ನಿರ್ದೇಶಕ ಎಂ. ನಾಗರಾಜ ಮಾತನಾಡಿದರು. ಇದೇ ಸಂದರ್ಭ ಹಾವೇರಿ ವೃತ್ತದ ಏಳು ಹಿರಿಯ ನೌಕರರಾದ ಕೇಂದ್ರ ಸಮಿತಿ ಸದಸ್ಯ ಸಿ.ಬಿ. ಇಟಗಿ, ಶಿಗ್ಗಾಂವಿ ಉಪವಿಭಾಗದ ಕಿರಿಯ ಎಂಜಿನಿಯರ್ ಎಂ.ಎಸ್. ಸೊರಟೂರು, ಸಹಾಯಕ ಎಂ.ಎಂ. ಸರ್ವೆ, ಜಾಗೃತದಳದ ಮೆಕ್ಯಾನಿಕ್ ಜಿ.ಡಿ. ಚಂದ್ರಾಪಟ್ಟಣ, ಹಾನಗಲ್ಲ ಉಪವಿಭಾಗದ ಚಾಲಕ ಪಿ.ಎಸ್. ಮರಿಯಣ್ಣವರ, ಸವಣೂರು ಉಪವಿಭಾಗದ ಮೀಟರ್ ರೀಡರ್ ಪಿ.ಎಸ್. ವೆಂಕಣ್ಣನವರ ಹಾಗೂ ಸವಣೂರು ಉಪವಿಭಾಗದ ಮೆಕ್ಯಾನಿಕ್ ಬಸಪ್ಪ ಮಾಳಗಿ ಅವರನ್ನು ಸನ್ಮಾನಿಸಲಾಯಿತು.
ಹಾವೇರಿ ವೃತ್ತಾಧಿಕಾರಿ ಎನ್.ಬಿ. ಕಟಕೋಳ, ಹೆಸ್ಕಾಂ ಉಪಾಧ್ಯಕ್ಷ ಪಿ.ಜಿ. ಅಮ್ಮಿನಬಾವಿ, ಹಾವೇರಿ ವೃತ್ತ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ, ಸಿ.ಬಿ. ಇಟಗಿ, ಕಾರ್ಮಿಕ ಮುಖಂಡರಾದ ಟಿ.ಆರ್. ರಾಮಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಆರ್.ಎಚ್. ಲಕ್ಷ್ಮೀಪತಿ, ಉಪ ಲೆಕ್ಕನಿಯಂತ್ರಣಾಧಿಕಾರಿ ಟಿ.ಎಸ್. ಹಾಲೇಶಪ್ಪ, ಸಿ.ಟಿ. ರಂಗನಾಥಗೌಡ, ಕೆ.ಸಿ. ರಮೇಶ, ಶೇಖರ, ಕೆ. ಬಲರಾಮ, ಎಲ್. ನಾಗರಾಜ, ಬಿ. ನರಸಿಂಹಮೂರ್ತಿ, ನಾರಾಯಣ, ರಾಜಾನಾಯಕ, ಉಡಿಬಾಬಾ, ಓ.ಎಸ್. ಶಶಿಧರ, ವೈ.ಎಂ. ನಿಟ್ಟೂರ, ಸಿ.ಎ. ಕೂಡಲಮಠ, ಎಂ.ಎ. ಮುರಾರಿ, ಎನ್.ಟಿ. ಹಾವೇರಿ, ಎಚ್.ಎಸ್. ಬಸವರಾಜಯ್ಯ, ಎಂ.ಡಿ. ಮಾಳಾಪುರ, ಎಚ್.ವೈ. ಪ್ರಶಾಂತ ಇತರರು ಇದ್ದರು.