ಶಿವಾಜಿ ಸೇವೆ ಅವಿಸ್ಮರಣೀಯ

Updated on: 

ರಾಣಿಬೆನ್ನೂರು: ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ ಕ್ಷತ್ರಿಯ ಮರಾಠ ಸೇವಾ ಸಮಿತಿ, ತಾಲೂಕು ಸಮಿತಿ ಆಶ್ರಯದಲ್ಲಿ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಮಹಾರಾಜರು ಸಾಕಷ್ಟು ಶ್ರಮಿಸಿದ್ದು, ಧೈರ್ಯ ಸಾಹಸ ಮೆರೆದಿದ್ದಾರೆ. ಯುದ್ಧ ಕಲೆಯನ್ನು ಕರಗತ ಮಾಡಿಕೊಂಡಿರುವ ಶಿವಾಜಿ ಮಹಾರಾಜರು ರಾಷ್ಟ್ರದ ಎಲ್ಲಾ ಜಾತಿ ಜನಾಂಗದವರ ಕಲ್ಯಾಣಕ್ಕಾಗಿ ಮಹತ್ವದ ಕಾರ್ಯ ಮಾಡಿದರು ಎಂದು ಬಣ್ಣಿಸಿದರು.
ತಾಲೂಕು ಮರಾಠ ಸಮಾಜದ ಯುವ ಮುಖಂಡ ನಾಗರಾಜ ಪವಾರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ಕಿರಣ ಮಾಂಡ್ರೆ, ಬಸವರಾಜ ಜಾಧವ, ಗಂಗಾಧರ ಬಣಕಾರ, ಮಂಜಪ್ಪ ಜಂಗಳಿ, ರಾಮಚಂದ್ರಪ್ಪ ಶ್ಯಾಮಣ್ಣನವರ, ಲಕ್ಷ್ಮಣ ಹುಯ್ಯಪ್ಪನವರ ಮಾತನಾಡಿದರು.
ಮೆರವಣಿಗೆ: ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವದ ಅಂಗವಾಗಿ ಕುದುರೆಯ ಮೇಲೆ ವೀರಾವೇಷಧಾರಿಯಾಗಿ ಕುಳಿತ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆ ನಡೆಯಿತು. ಶಾಸಕ ಕೆ.ಬಿ. ಕೋಳಿವಾಡ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮರಾಠಾ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಜಂಗಳಿ, ಪ್ರಕಾಶ ಜಾಧವ, ನವೀನ ಜಾಧವ, ತಿರುಕಪ್ಪ ಹುಯ್ಯಪ್ಪನವರ, ಮಂಜಪ್ಪ ಹುಬ್ಬಳ್ಳಿ, ಕೃಷ್ಣಪ್ಪ ಬಿದರಿ ಸೇರಿದಂತೆ ನೂರಾರು ಯುವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜರ ನೂತನ ಮೂರ್ತಿಯ ಮೆರವಣಿಗೆ ನಡೆಸಿದರು. ಇದೇ ಸಂದರ್ಭ ಮೂರ್ತಿ ತಯಾರಿಸಿರುವ ರಾಣಿಬೆನ್ನೂರು ನಗರದ ನಾಡಿಗೇರ ಓಣಿಯ ಶಿಲ್ಪಿ ರಾಘವೇಂದ್ರ ತ್ರಾಸದರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com