ಸಿದ್ದಾಪುರ: ಸಿದ್ದಾಪುರ ಸಮೀಪದ ಮಾಲ್ದಾರೆಯ ಗುಡ್ಲೂರು ನಿವಾಸಿ ರಾಮಕೃಷ್ಣ ಎಂಬುವವರ ಮನೆಯಿಂದ ಇತ್ತೀಚೆಗೆ ಆರು ಚೀಲ ಕಾಫಿ ಕಳವು ಮಾಡಿದ್ದ ಮೂವರನ್ನು ಶನಿವಾರ ಬಂಧಿಸಲಾಗಿದೆ.
ಗುಡ್ಲೂರು ಗ್ರಾಮದ ಉಮ್ಮಿತ್, ತೇಜ, ಎಸು ಬಂಧಿತರು. ಆರೋಪಿಗಳು ಕದ್ದ ಕಾಫಿಯನ್ನು ಗೋಣಿಕೊಪ್ಪದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಕಾಫಿಯನ್ನು ವಶಪಡಿಸಿಕೊಳ್ಳಲಾಗಿದೆ. ಠಾಣಾಧಿಕಾರಿ ರಾಮರೆಡ್ಡಿ, ಅಪರಾಧ ಪತ್ತೆ ವಿಭಾಗದ ಮುಖ್ಯಪೇದೆ ಟಿ.ಆರ್. ಪಾಪಯ್ಯ, ಸಿಬ್ಬಂದಿ ರವಿ, ಸುಬ್ರಮಣಿ, ಸತೀಶ್ ಮತ್ತಿತರರು ಇದ್ದರು.