ಕೊಡಗಿಗೆ ಸರ್ಕಾರ ಏನನ್ನೂ ನೀಡದೇ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕುಶಾಲನಗರ-ಮೈಸೂರು ರೇಲ್ವೇ ಯೋಜನೆಗೆ ರಾಜ್ಯ ಸರ್ಕಾರದ ಪಾಲು ಹಣದ ಪ್ರಸ್ತಾಪ ಪ್ರಸ್ತಾಪಿಸಿಲ್ಲ.
-ಜಿ. ಚಿದ್ವಿಲಾಸ್. ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ
ಇದೊಂದು ಚುನಾವಣಾ ಪರ ಬಜೆಟ್. ಖರ್ಚುಗಳೇ ಹೆಚ್ಚು, ಆದಾಯ ಮೂಲ ಕಡಿಮೆಯಿದೆ. ಹಣದುಬ್ಬರ ಪ್ರಮಾಣ ಮಿತಿ ಮೀರಿದೆ. ಕೋಟಿ ಕೋಟಿ ರುಪಾಯಿ ಯೋಜನೆಗಳ ಆಶ್ವಾಸನೆಗಳು ಪ್ರಕಟಗೊಂಡಿವೆ.
-ಗೀತಾ ಗಿರೀಶ್. ವಿಮೆ ಸಲಹೆಗಾರರು
ಉದ್ಯಮಿಗಳಿಗೆ, ವಹಿವಾಟುದಾರರಿಗೆ ಪ್ರಯೋಜನವಿಲ್ಲದ ಬಜೆಟ್. ಆದಾಯ ತೆರಿಗೆ ಮಿತಿಯನ್ನು ಶೇ. 14.50 ರಿಂದ ಶೇ. 14 ಕ್ಕೆ ಇಳಿಸಿರುವುದು ಸ್ವಾಗತಾರ್ಹ.
-ಎ.ಕೆ. ಜೀವನ್. ರಾಜ್ಯ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ
ವರ್ಷವಿಡೀ ಬೆಲೆ ಏರಿಕೆ ನಡುವೆ ನೊಂದು ಬಸವಳಿದಿರುವ ಜನತೆಗೆ ಸರ್ಕಾರ ಮಂಡಿಸಿರುವ ಬಜೆಟ್ ಅನುಷ್ಠಾನಕ್ಕೆ ಬರುವುದರ ಬಗ್ಗೆ ಸಂಶಯ ಉಂಟಾಗಿದೆ.
-ಎಂ. ಕೃಷ್ಣ. ಜಿಲ್ಲಾಧ್ಯಕ್ಷರು, ಕರ್ನಾಟಕ ಕಾವಲು ಪಡೆ
ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಲ್ಲಿ ಇದೊಂದು ಜನಪರ ಬಜೆಟ್ ಎನ್ನುವುದರಲ್ಲಿ ತಪ್ಪಿಲ್ಲ. ಕಳೆದ ಸಾಲಿನ ಬಜೆಟ್ನಂತಾಗಬಾರದು. ಅನುಷ್ಠಾನಕ್ಕೆ ತರುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕು.
-ಸುಧಾಮಣಿ. ಪ್ರಾಂಶುಪಾಲರು
ಈ ಬಜೆಟ್ ಬಿಜೆಪಿ ಸರ್ಕಾರದ ಬಜೆಟ್ ಅಲ್ಲ. ಇದು ಅವರ ಚುನಾವಣಾ ಪ್ರಣಾಳಿಕೆಯಂತೆ ಕಾಣುತ್ತಿದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡೇ ಬಜೆಟ್ ಮಂಡಿಸಲಾಗಿದೆ.
- ಹಸೀನಾ ಬಾನು. ಗೋಣಿಕೊಪ್ಪಲು
ಇದು ರೈತರಿಗೆ ಅನುಕೂಲಕರವಾದ ಬಜೆಟ್ ಅಲ್ಲ. ಅಧಿಕಾರಿಗಳು ತಯಾರಿಸಿದ ಬಜೆಟ್ ಅನ್ನಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಓದಿದ್ದಾರೆ ಅಷ್ಟೇ.
-ಕೊಟ್ಟಂಗಡ ಸುಜಿತಾ. ಬಲ್ಯಮುಂಡೂರು.
ಬಜೆಟ್ ಜನಪರವಾಗಿದೆ. ರಾಜ್ಯದ ವಿವಿಧೆಡೆಗಳಲ್ಲಿ ನರಕಯಾತನೆ ಅನುಭವಿಸುತ್ತಿರುವ ಎಂಡೋ ಸಂತ್ರಸ್ತರ ಜೀವನದಲ್ಲಿ ಬೆಳಕು ಮೂಡಿಸುವ ಯೋಜನೆ ಇನ್ನೂ ವಿಸ್ತಾರ ರೂಪದಲ್ಲಿ ಪ್ರಕಟಿಸಬೇಕಾಗಿತ್ತು.
-ಕಂಗ್ವೆ ವಿಶ್ವಾನಾಥ ಶೆಟ್ಟಿ, ಉಪ್ಪಿನಂಗಡಿ
ಬಡವರ ಮತ್ತು ರೈತರ ಪರವಾಗಿರುವ ಸುಪರ್ ಬಜೆಟ್. ನೂತನ ಮೂಡಬಿದ್ರೆ ಮತ್ತು ಕಡಬ ತಾಲೂಕು ಘೋಷಣೆ ಮಾಡುವ ಮೂಲಕ ದ.ಕ, ಜಿಲ್ಲೆಗೆ ಉತ್ತಮ ಕೊಡುಗೆ ನೀಡಲಾಗಿದೆ.
-ಗೋಪಾಲಕೃಷ್ಣ ಹೇರಳೆ
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ
ಇದೊಂದು ಚುನಾವಣಾ ಪರ ಬೋಗಸ್ ಬಜೆಟ್. ಬಿಜೆಪಿಯ ಇಮೇಜ್ ಜನರ ನಡುವೆ ಉತ್ತಮವಾಗಿಲ್ಲದ ಕಾರಣ ಬಜೆಟ್ನಲ್ಲಿ ತಿಳಿಸಿದ ಅಂಶಗಳು ಜಾರಿಯಾಗುವ ಅವಕಾಶಗಳು ಕಡಿಮೆಯಾಗಿದೆ.
- ಲೋಕೇಶ್ ಹೆಗ್ಡೆ, ಜೆಡಿಎಸ್ ನಾಯಕ