ಮಡಿಕೇರಿ: ಚೆಟ್ಟಳ್ಳಿಯಲ್ಲಿ ಕೊಂಗೇಟ್ಟಿರ ಕಾರ್ಸನ್ ಕಾಳಪ್ಪ ಸ್ಮಾರಕ ಮುಕ್ತ ಕಾಲ್ಚೆಂಡು ಪಂದ್ಯಾಟ ಚೆಟ್ಟಳ್ಳಿಯ ಚೇತನ ಯುವಕ ಸಂಘದ ವತಿಯಿಂದ ಫೆ.22 ರಿಂದ 24ರವರೆಗೆ ನಡೆಯಲಿದೆ. ಈ ಬಾರಿ 5್ಗ3 ಆಟಗಾರರ ಮುಕ್ತ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ.
ಚೆಟ್ಟಳ್ಳಿ ಚೇತನ ಯುವಕ ಸಂಘದ ಅಧ್ಯಕ್ಷರಾಗಿದ್ದು, ದಿವಂಗತರಾದ ಕೊಂಗೆಟ್ಟಿರ ಕಾರ್ಸನ್ ಕಾಳಪ್ಪ ಸ್ಮರಣಾರ್ಥವಾಗಿ ಚೆಟ್ಟಳ್ಳಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಸಲು ತೀರ್ಮಾನಿಸಲಾಗಿದೆ.
ಪ್ರಥಮ ಬಹುಮಾನ ಪಡೆಯುವ ತಂಡಕ್ಕೆ ಆಕರ್ಷಕ ವೈಯಕ್ತಿಕ ಟ್ರೋಫಿ ಹಾಗೂ 10 ಸಾವಿರ ನೀಡಲಾಗುವುದು. ದ್ವಿತೀಯ ತಂಡಕ್ಕೆ ಆಕರ್ಷಕ ವೈಯಕ್ತಿಕ ಟ್ರೋಫಿ ಹಾಗೂ 5 ಸಾವಿರ ನೀಡಲಾಗುವುದು.
ಕಳೆದ 15 ವರ್ಷಗಳಿಂದಲೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ನ ಸಹಕಾರದೊಂದಿಗೆ ಅತ್ಯಂತ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಸಂಘದ ಕ್ರಿಯಾಶೀಲ ಅಧ್ಯಕ್ಷರಾಗಿ ಸಂಘ ಮುನ್ನಡೆಸುತ್ತಿದ್ದ ದಿವಂಗತ ಕೊಂಗೆಟ್ಟಿರ ಕಾರ್ಸನ್ ಕಾಳಪ್ಪ ಜ್ಞಾಪಕಾರ್ಥವಾಗಿ ಅವರ ಪತ್ನಿ ವಾಣಿ ಅವರು ಪ್ರಥಮ ಟ್ರೋಫಿ ನೀಡುತ್ತಿದ್ದಾರೆ. ದ್ವಿತೀಯ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನವನ್ನು ಟಿ.ಎಸ್. ರವಿಚಂದ್ರ ನೀಡಲಿದ್ದಾರೆ ಎಂದು ಚೇತನ ಯುವಕ ಸಂಘದ ಪ್ರಕಟಣೆ ತಿಳಿಸಿದೆ.