ಸುಂಟಿಕೊಪ್ಪ: ಮನೆ ಕೆಲಸಕ್ಕಿದ್ದ ಅವಿವಾಹಿತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ 1ನೇ ವಿಭಾಗದಲ್ಲಿ ನಡೆದಿದೆ.
ಎಚ್.ಡಿ. ಕೋಟೆಯ ಕಲ್ಲೂರಪ್ಪ ಎಂಬವರ ಪುತ್ರಿ ಸವಿತಾ (20) ಮೃತ ಯುವತಿ. ಈಕೆ ಸುಂಟಿಕೊಪ್ಪ 1ನೇ ವಿಭಾಗದಲ್ಲಿ ವಾಸವಿರುವ ಕುಶಾಲನಗರ ಪಾಲಿಟೆಕ್ನಿಕ್ ಉಪನ್ಯಾಸಕ ರಘು ಎಂಬವರ ಮನೆಯಲ್ಲಿ ಕಳೆದ 7 ತಿಂಗಳಿನಿಂದ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಳು. ಕಳೆದ ನಾಲ್ಕೈದು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಅನಾರೋಗ್ಯವನ್ನು ಸಹಿಸಲಾಗದೆ ಜ.18 ರಂದು ಛಾವಣಿಗೆ ಚೂಡಿದಾರದ ವೇಲ್ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಂಟಿಕೊಪ್ಪ ಠಾಣಾಧಿಕಾರಿ ಕೃಷ್ಣಕುಮಾರ್ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಯುವತಿಯ ಪೋಷಕರಿಗೆ ಮೃತದೇಹವನ್ನು ಒಪ್ಪಿಸಲಾಯಿತು. ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.