ಮಡಿಕೇರಿ: ಸೇನೆಯಲ್ಲಿ ಭರ್ತಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಮುದೂರ್ ಬಾಗಲಕೋಟೆ ಜಿಲ್ಲೆ ರನ್ ಸ್ಟೇಡಿಯಂನಲ್ಲಿ ಫೆ. 4ರಂದು ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಸೈನಿಕ ಲಿಪಿಕ, ಉಗ್ರಾಣ, ಪಾಲಕ ತಾಂತ್ರಿಕ ಹುದ್ದೆಗಳಿಗೆ ಭರ್ತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ- ವಿದ್ಯಾರ್ಹತೆ ಮತ್ತು ವಯೋವುತಿ ಸೈನಿಕ ಲಿಪಿಕ, ಉಗ್ರಾಣ ಹುದ್ದೆಗೆ ಪಿಯುಸಿ ಶೇ. 50, ವಯೋವುತಿ 171/2 ದಿಂದ 23 ವರ್ಷದವರೆಗೆ. ಪಾಲಕ ತಾಂತ್ರಿಕ ಹುದ್ದೆಗೆ ವಿದ್ಯಾರ್ಹತೆ ವಿಜ್ಞಾನ. ಬೇಕಾದ ದಾಖಲಾತಿಗಳು- ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಹೈಯರ್ ಪರೀಕ್ಷೆಯ ಅಂಕಪಟ್ಟಿಯ ಮೂಲಪ್ರತಿ ಹಾಗೂ 2 ಜೆರಾಕ್ಸ್ ಪ್ರತಿಗಳು. 12 ಇತ್ತೀಚಿನ ಕಲರ್ ಭಾವಚಿತ್ರಗಳು ನೆಗೆಟಿವ್ನೊಂದಿಗೆ, ಎನ್ಸಿಸಿ ಸರ್ಟಿಫಿಕೇಟಿನ ಮೂಲ ಪ್ರತಿ ಹಾಗೂ 02 ಜೆರಾಕ್ಸ್ ಪ್ರತಿಗಳು. ಸ್ಪೋಟ್ಸ್ ಸರ್ಟಿಫಿಕೇಟ್ನ ಮೂಲಪ್ರತಿ ಹಾಗೂ 2 ಜೆರಾಕ್ಸ್ ಪ್ರತಿಗಳು, ಮಾಜಿ ಸೈನಿಕರ, ಯುದ್ದ ವಿಧವೆಯರ ಮಕ್ಕಳೆಂದು ಪರಿಗಣಿಸಲು ರೆಕಾರ್ಡ್ಸ್ನಿಂದ ಪಡೆದ ಸಂಬಂಧ ಪತ್ರ, ತಹಸೀಲ್ದಾರರಿಂದ ಪಡೆದ ವಾಸ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.