ಮತ್ತು ಬರಿಸಿ ಮಹಿಳೆ ಆಭರಣ ಕಳವು

Updated on: 

ಕುಶಾಲನಗರ: ಸಂತೆಗೆಂದು ಬಂದ ಮಹಿಳೆಯೊಬ್ಬರಿಗೆ ಮತ್ತು ಬರಿಸಿ ಅವರಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಕುಶಾಲನಗರದಲ್ಲಿ ಮಂಗಳವಾರ ಸಂಭವಿಸಿದೆ.
ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿ ಗ್ರಾಮದ ನಿವಾಸಿ ನಿವೃತ ಅರಣ್ಯರಕ್ಷಕ ಕೆಂಗನಾಯ್ಕ ಎಂಬುವವರ ಪತ್ನಿ ಬಸಮ್ಮ(60) ಕುಶಾಲನಗರದ ಸಂತೆಗೆ ಮಂಗಳವಾರ ಆಗಮಿಸಿದ್ದ ಸಂದರ್ಭ ಸಂತೆಯಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಬಸಮ್ಮ ಅವರನ್ನು ಪರಿಚಯ ಮಾಡಿಕೊಂಡು ಅಗರಬತ್ತಿ ಪರಿಮಳ ಆಸ್ವಾದಿಸುವಂತೆ ಕೋರಿದರು.  ಅಗರಬತ್ತಿಯನ್ನು ಮೂಸಿದ ಕೂಡಲೇ ಬಸಮ್ಮ ಮಂಕಾದರು. ಬಸಮ್ಮ ಅವರನ್ನು ಸಂತೆ ಪಕ್ಕದಲ್ಲಿಯೇ ಇದ್ದ ಕಾವೇರಿ ನದಿ ದಾರಿಗೆ ಕರೆದುಕೊಂಡು ಹೋಗಿ ಅವರ ಮೈಮೇಲಿದ್ದ 35 ಗ್ರಾಂ. ಚಿನ್ನವನ್ನು ಚೋರರು ಅಪಹರಿಸಿದ್ದಾರೆ. ಕೆಲ ಕ್ಷಣಗಳ ಕಾಲ ಎಚ್ಚತ್ತುಕೊಂಡ ಬಸಮ್ಮ ತಮ್ಮ ಮೈಮೇಲಿದ್ದ ಮಾಂಗಲ್ಯಸರ, ಬಳೆ, ಓಲೆಗಳು ಕಳುವಾಗಿರುವುದನ್ನು ಕಂಡು ಗಾಬರಿಯಾದರು. ಈ ಬಗ್ಗೆ ಅವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com