ಸುಂಟಿಕೊಪ್ಪ: ಈದ್ ಮಿಲಾದ್ ಅಂಗವಾಗಿ ಸುಂಟಿಕೊಪ್ಪದ ವಿವಿಧ ಜಮಾಅತ್ಗಳ ವತಿಯಿಂದ ನಗರದ ಮುಸ್ಲಿಂ ಬಾಂಧವರು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮದರಸಗಳಲ್ಲಿ ಧಾರ್ಮಿಕ ಪ್ರವಚನ, ಮೂರು ದಿನಗಳ ವಿಶೇಷ ಪ್ರಾರ್ಥನೆ ಹಾಗೂ ಕಲಾ ಕಾರ್ಯಕ್ರಮಗಳು ನಡೆದವು. ಹಬ್ಬದ ಅಂಗವಾಗಿ ಸುಂಟಿಕೊಪ್ಪ ಪಟ್ಟಣದಿಂದ ಸುಂಟಿಕೊಪ್ಪ ಜುಮ್ಮಾ ಮಸೀದಿ ಮುನವ್ವಿರುಲ್ ಮದರಸ, ಖದೀಜ ಉಮ್ಮ ಮದರಸ ಮತ್ತು ಗದ್ದೆಹಳ್ಳದ ನೂರ್ ಜುಮ್ಮಾ ಮಸೀದಿ, ಹನಫಿ ಜುಮ್ಮಾ ಮಸೀದಿಯ ಮುಸ್ಲಿಂ ಬಾಂಧವರು ಗದ್ದೆಹಳ್ಳದ ಗಾಂಧಿ ವೃತ್ತದವರೆಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.