ಸೋಮವಾರಪೇಟೆ: ಸೋಮವಾರಪೇಟೆ ವ್ಯಾಪ್ತಿಯ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ಬೆಳಗ್ಗೆ ಪ್ರಾರ್ಥನಾ ಮಂದಿರಗಳಿಗೆ ತೆರಳಿದ ಮುಸ್ಲಿಮರು ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿಗೆ ಸಮೀಪದ ಹೊಸತೋಟ ಗ್ರಾಮದಲ್ಲಿರುವ ಹಿದಾಯತುಲ್ ಇಸ್ಲಾಂ ಮದರಸಾದಲ್ಲಿ ಈದ್ ಮಿಲಾದ್ ಪ್ರಯುಕ್ತ ಜನಾಂಗದ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಮುಖ್ಯರಸ್ತೆಯಲ್ಲಿ ಈದ್ ಮೆರವಣಿಗೆ ನಡೆಯಿತು. ಮದರಸ ಸಮಿತಿ ಅಧ್ಯಕ್ಷ ಸೈದು ಹಾಜಿ, ಕಾರ್ಯದರ್ಶಿ ಮಜೀದ್, ಪ್ರಮುಖರಾದ ಸಲೀಂ, ಮಹಮ್ಮದ್ ಇ.ಟಿ. ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಂತೆಯೇ ಬಜೆಗುಂಡಿ ಗ್ರಾಮದಲ್ಲಿರುವ ಖಳರಿಯಾ ಮಸೀದಿ, ಕಲ್ಕಂದೂರು, ತಣ್ಣೀರುಹಳ್ಳ, ಕಾಗಡಿಕಟ್ಟೆ, ಸೋಮವಾರಪೇಟೆ ನಗರದಲ್ಲಿರುವ ಜಲಾಲಿಯಾ, ಜಾಮಿಯಾ ಮಸೀದಿಗಳಲ್ಲೂ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.