ಮಡಿಕೇರಿ: ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನವನ್ನು ಪ್ರತಿ ವರ್ಷ ಜಿಲ್ಲಾಡಳಿತ ವತಿಯಿಂದ ಆಚರಿಸಲು ಕ್ರಮ ವಹಿಸಲಾಗುವುದು. ಕಾರ್ಯಪ್ಪ ಅವರ ಪ್ರಾಮಾಣಿಕತೆ, ಸಮಯ ಪ್ರಜ್ಞೆ, ದಕ್ಷತೆ ಪ್ರತಿಯೊಬ್ಬರಿಗೂ ಮಾದರಿ ಎಂದು ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಡಿಕೇರಿಯಲ್ಲಿ ಕೊಡಗು ಜಿಲ್ಲಾಡಳಿತದ ವತಿಯಿಂದ ಸೋಮವಾರ ಆಚರಿಸಲಾದ ಫೀ.ಮಾ. ಕೆ.ಎಂ. ಕಾರ್ಯಪ್ಪ 114ನೇ ಹುಟ್ಟು ಹಬ್ಬ ಸಂಭ್ರಮದಲ್ಲಿ ಅವರು ಮಾತನಾಡಿದರು. ಫೀ.ಮಾ.ಕಾರ್ಯಪ್ಪ ಪ್ರತಿಮೆಗೆ ವಿಧಾನಸಭಾಧ್ಯಕ್ಷ ಬೋಪಯ್ಯ ಮಾಲಾರ್ಪಣೆ ಮಾಡಿದರು.