ಸುಂಟಿಕೊಪ್ಪ: ಆಟೋ ಚಾಲಕರ ಸಂಘದ ವತಿಯಿಂದ ಮೃತ ಮುಖೇಶ್ ಕುಟುಂಬಕ್ಕೆ ಸಂತಾಪ ಸೂಚಿಸಿ ಧನ ಸಹಾಯವನ್ನು ನೀಡಲಾಯಿತು.
ಜ.29ರಂದು ಆಟೋ ರಿಕ್ಷಾ ಮಗುಚಿದ ಪರಿಣಾಮ ಚಾಲಕ ಮುಖೇಶ್ ಮರಣಕ್ಕೀಡಾಗಿದ್ದು ಮೃತನ ಕುಟುಂಬಕ್ಕೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮತ್ತು ಸದಸ್ಯರು ತೆರಳಿ ರು. 10,000 ನೆರವು ನೀಡುವುದರೊಂದಿಗೆ ಸಂತಾಪ ಸೂಚಿಸಿದರು.
ಈ ಸಂದರ್ಭ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಿ.ಸಿ. ಮಂಜುನಾಥ್, ಸಂತೋಷ್, ವಿಜಯ, ಬಿ.ಎಲ್. ವಿಶ್ವನಾಥ್ ಪೂಜಾರಿ, ಬಿ..ಬಿ. ಯಶೋಧರ ಪೂಜಾರಿ, ನಾರಾಯಣ, ರಂಜಿತ್, ಆನಂದ, ಅವಲಕುಟ್ಟಿ, ಶಿವಕುಮಾರ್, ಗ್ಯಾಬ್ರಿಯಲ್ ಡಿಸೋಜ, ಮೋಹನ್ ರಜನಿ), ಬಾಲಕೃಷ್ಣ, ಎ.ಎಂ. ಶರೀಫ್, ಫರೀದ್, ಆಶ್ರಫ್, ಶೇಖರ್, ಶರತ್ ಮತ್ತಿತರರು ಇದ್ದರು.
ಸಂತಾಪ: ಆಟೋ ರಿಕ್ಷಾ ಅವಘಡದಲ್ಲಿ ಮೃತಪಟ್ಟ ಮುಖೇಶನ ನಿಧನಕ್ಕೆ ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘವು ಸಂತಾಪ ಸೂಚಿಸಿದೆ. ಬುಧವಾರ ತಮ್ಮ ಆಟೋಗಳನ್ನು ಚಲಾಯಿಸದೆ 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
ಇಂದು ಪುನರ್ ಪ್ರತಿಷ್ಠೆ
ಮಡಿಕೇರಿ: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಗುರುವಾರ ನಡೆಯಲಿದೆ. ಕೆ.ವಿ. ಗಂಗಾಧರನ್ ಆಚಾರಿ ಮಾವುಂಗಾಲ್ ಶ್ರೀದೈವಗಳ ಪುನರ್ ಪ್ರತಿಷ್ಠೆ ನಡೆಸಲಿದ್ದು, ಕುತ್ತಿಕೋಲ್ ಭಗವತೀ ಕ್ಷೇತ್ರದ ಅಚ್ಚಮ್ಮಾರ್ ನೇತೃತ್ವ ವಹಿಸಲಿದ್ದಾರೆ. ರಾತ್ರಿ ಮರೋಟ್ ಉತ್ಸವ ನಡೆಯಲಿದೆ ಎಂದು ಕುಡೆಕಲ್ಲು ಮನೆತನದ ಆಡಳಿತಗಾರ ವಾಸುದೇವ ಗೌಡ ತಿಳಿಸಿದ್ದಾರೆ.