ಶನಿವಾರಸಂತೆ: ಸಮೀಪದ ಗುಡುಗಳಲೆ ಬದ್ರಿಯಾ ಶಾಫಿ ಜುಮ್ಮಾ ಮಸೀದಿ ವತಿಯಿಂದ ವಿಶ್ವ ಪ್ರವಾದಿ ಹಸ್ರತ್ ಮಹಮ್ಮದ್ ಅವರ 1487ನೇ ಜನ್ಮದಿನಾಚರಣೆ, ಈದ್ಮಿಲಾದ್ ಕಾರ್ಯಕ್ರಮ ನಡೆಯಿತು. ಗುಡುಗಳಲೆ ಮಸೀದಿ ಅಧ್ಯಕ್ಷ ಎಸ್.ಎ. ಅಬ್ದುಲ್ ಖಾದರ್ ಧ್ವಜಾರೋಹಣ ನೆರವೇರಿಸಿದರು. ಸಭೆಯನ್ನು ಇಸ್ಮಾಯಿಲ್ ಫೈಜಿ ಖತೀಬ್ ಉದ್ಘಾಟಿಸಿದರು. ಜಮಾಅತ್ ಕಮಿಟಿ ಉಪಾಧ್ಯಕ್ಷ ಹಮೀದ್ ಸಿ.ಎ, ಗೌರವ ಅಧ್ಯಕ್ಷ ಜಿ.ಎಂ. ಹಮೀದ್, ಶೇಕಬ್ಬಾಹಾಸಿ, ಕಾರ್ಯದರ್ಶಿ ಮುಸ್ತಾಫ ಕೆ.ಎಂ., ಶೇಕಬ್ಬಾ (ಚೆರಿಯಾಕ), ಹನೀಫ್, ಇಬ್ರಾಹಿಂ, ಮದ್ರಸ ಅಧ್ಯಾಪಕರಾದ ಅಬ್ದುಲ್ ರಹಮಾನ್ ಮುಸ್ಲಿಯಾರ್, ಹಸೈನಾರ್ ಕಾಜೂರು, ಯೂಸಫ್ ದಾರಿಮಿ, ಹಂಸ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಫೈಜಿ ಕಾತಿಬ್, ಬಿಜೆಎಂ ಹಸೈನಾರ್ ಫೈಜಿ ಇದ್ದರು. ಎಸ್.ಎ. ಖಾದರ್ ಅಧ್ಯಕ್ಷತೆ ವಹಿಸಿದ್ದರು.