ಕುಶಾಲನಗರ: ಕುಶಾಲನಗರ ಪಪಂ ಮೂಲಕ ಕಚೇರಿಯಲ್ಲಿ ಪಾರದರ್ಶಕ ಆಡಳಿತ, ಪೌರ ಕಾರ್ಮಿಕರ ಆರೋಗ್ಯ ಸುರಕ್ಷತೆ ಹಾಗು ಪರಿಸರ ಉಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು. ಪಂಚಾಯಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಚಾಲನೆ ನೀಡಿದರು. ನಂತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕರಿಗೆ ಸೂಕ್ತ ಸೇವೆ ಹಾಗು ಪಾರದರ್ಶಕ ಆಡಳಿತ ನಿರ್ವಹಣೆಗಾಗಿ ಆಡಳಿತ ಮಂಡಳಿ ತೀರ್ಮಾನದಂತೆ ರು. 1.80 ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಕಚೇರಿಯಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ಪಟ್ಟಣದಲ್ಲಿ ಸಮರ್ಪಕ ಕಸವಿಲೇವಾರಿಗೆ ಯೋಜನೆ ರೂಪಿಸಲಾಗಿದೆ. ಮನೆಮನೆಗಳಿಂದ ತ್ಯಾಜ್ಯಗಳನ್ನು ವಿಂಗಡಿಸಿ, ಸಂಗ್ರಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರು. 5 ಲಕ್ಷ ವೆಚ್ಚದ ಯೋಜನೆಯಡಿ ಪ್ರತಿ ಮನೆಗಳಿಗೆ ತಲಾ 2 ಬಕೆಟ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭ 18 ಪೌರ ಕಾರ್ಮಿಕರಿಗೆ ಆರೋಗ್ಯರಕ್ಷಕ ಸೌಲಭ್ಯಗಳಾದ ರೈನ್ಕೋಟ್, ಮಾಸ್ಕ್, ಗ್ಲೌಸ್, ಗಂಬೂಗಟ್‌ಗಳ ವಿತರಣೆ ನಡೆಯಿತು. ಉಪಾಧ್ಯಕ್ಷೆ ಪಾರ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಡಿ. ಚಂದ್ರು, ರಶ್ಮಿ ಅಮೃತ್, ಸದಸ್ಯರಾದ ಎಚ್.ಕೆ. ಕರಿಯಪ್ಪ, ಮಧುಸೂದನ್, ಪ್ರಮೋದ್ ಮುತ್ತಪ್ಪ, ರೇಣುಕಾ, ಕವಿತಾ, ಸುರೆಯಾಭಾನು, ಲಲಿತ, ಮುಖ್ಯಾಧಿಕಾರಿ ಕೆ.ಎಲ್. ರಮೇಶ್, ಎಂಜಿನಿಯರ್ ರಘು, ಆರೋಗ್ಯಾಧಿಕಾರಿ ಸತೀಶ್ ಉಪಸ್ಥಿತರಿದ್ದರು.
Advertisement